ಗಂಡು ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ.

42
ಯಾದಗಿರಿ: 9ನೇ ತರಗತಿ  ವಿದ್ಯಾರ್ಥಿನಿಯೊಬ್ಬಳು  ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ  ಶಹಾಪುರದ ವಸತಿ ಶಾಲೆಯಲ್ಲಿ ನಡೆದಿದೆ. 9ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ  ಶೌಚಕ್ಕೆ ಹೋದ ಸಮಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ಮತ್ತು ಮಗು ಶಹಾಪುರ ಸರ್ಕಾರಿ  ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದು. ಇನ್ನು ಈ ಬಗ್ಗೆ ವಸತಿ ಶಾಲೆಯ ಮುಖ್ಯೋಪಾಧ್ಯಾಯರು ಮಾತನಾಡಿ   ಬಾಲಕಿ ಗರ್ಭಿಣಿಯಾದ  ಬಗ್ಗೆ ನಮಗೆ ಯಾವ ಲಕ್ಷಣಗಳು ಕಂಡಿರಲಿಲ್ಲ  ನಮಗೂ ಆಶ್ಚರ್ಯವಾಗಿದೆ  ತನಿಖೆ ಬಳಿಕವೆ  ಯಾರು ಕಾರಣ ಎಂದು ತಿಳಿಯಬೇಕಾಗಿದೆ ಎಂದಿದ್ದಾರೆ.  ಶಹಾಪುರ ಪೊಲೀಸ್ ಠಾಣೆ  ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ,ಪೊಲೀಸರು ತನಿಖೆ ನಡೆಸುತ್ತಿದ್ದಾರೆ.