ಗಮನಾರ್ಹ ಸೇವೆ ಸಲ್ಲಿಸಿದ ವೈದ್ಯರು, ಶುಶ್ರೂಷಕಿಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ…

133
firstsuddi

ಚಿಕ್ಕಮಗಳೂರು: ರೋಟರಿ ಕಾಫಿ ಲ್ಯಾಂಡ್ ಮತ್ತು ರೋಟರಿ ಕ್ಲಬ್ ನಿಂದ ನಗರದ ಎಂ.ಎಲ್.ವಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ತಾಯಿ ಮತ್ತು ಮಗುವಿನ ಆರೋಗ್ಯ ಮಾಸಿಕ ಕಾರ್ಯಕ್ರಮದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ವೈದ್ಯರು, ಶುಶ್ರೂಷಕಿಯರು ಮತ್ತು ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.

ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ಎಸ್.ವಿ.ಮಂಜುನಾಥ್, ಕಾರ್ಯದರ್ಶಿ ನಾಗೇಶ್ ಕೆಂಜಿಗೆ, ರೋಟರಿ ನಿರ್ದೇಶಕ ರವೀಂದ್ರನಾಥ್ ನಾಯ್ಡು, ಲೆಫ್ಟಿನೆಟ್ ಗವರ್ನರ್ ನಾಸೀರ್ ಹುಸೇನ್, ಅಧ್ಯಕ್ಷ ಎನ್. ಶ್ರೀವಾತ್ಸವ್, ಕಾರ್ಯದರ್ಶಿ ಎಂ.ಎಲ್.ಸುಜೀತ್, ತನೋಜ್ ಹಾಗೂ ಇತರರಿದ್ದರು.