ಗರ್ಭಿಣಿ ಮಹಿಳೆಯರು ಯಾವ ಆಹಾರ ಸೇವಿಸಬೇಕು…ಯಾವ ಆಹಾರವನ್ನು ಸೇವಿಸಬಾರದು…?

1119
firstsuddi

   ಗರ್ಭವಸ್ಥೆಯಲ್ಲಿ ಒಂಬತ್ತು ತಿಂಗಳು ಬಹುಮುಖ್ಯವಾಗಿದ್ದು, ಈ ವೇಳೆ ಉತ್ತಮ ಪೌಷ್ಠಿಕಾಂಶ ಆಹಾರದ ಅಗತ್ಯವಿರುತ್ತದೆ. ಆರೋಗ್ಯಕಾರಿ ಆಹಾರವನ್ನು ಸೇವಿಸುವುದರಿಂದ ತಾಯಿ ಹಾಗೂ ಮಗು ಇಬ್ಬರ ಆರೋಗ್ಯವು ಉತ್ತಮವಾಗಿರುತ್ತದೆ. ಗರ್ಭಿಣಿ ಮಹಿಳೆಯರಲ್ಲಿ ಸರ್ವೆ ಸಾಮಾನ್ಯವಾಗಿ ತಾವು ಯಾವ ಆಹಾರವನ್ನು ಸೇವಿಸಬೇಕು ಹಾಗೂ ಯಾವ ಆಹಾರವನ್ನು ಸೇವಿಸಬಾರದು ಎಂಬ ಗೊಂದಲವಿರುತ್ತದೆ. ಗರ್ಭವಸ್ಥೆಯಲ್ಲಿ ಸೇವಿಸುವಂತಹ ಆಹಾರ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದ್ದು, ಹೆಚ್ಚಿನ ಪೌಷ್ಠಿಕಾಂಶ ಆಹಾರವನ್ನು ಸೇವಿಸುವ ಅಗತ್ಯವಿರುತ್ತದೆ. ಗರ್ಭಿಣಿ ಮಹಿಳೆಯರು ಮಾಮೂಲಿ ಸೇವಿಸುವ ಆಹಾರಕ್ಕಿಂತ ಹೆಚ್ಚು ಆಹಾರವನ್ನು ಪ್ರತಿದಿನ ಸೇವಿಸಬೇಕು. ಹಾಲು, ಹಸಿರು ತರಕಾರಿ, ಸೊಪ್ಪು, ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಆದರೆ ಗರ್ಭವಸ್ಥೆಯಲ್ಲಿ ಒಟ್ಟಾರೆಯಾಗಿ ಎಲ್ಲಾ ರೀತಿಯ ಆಹಾರವನ್ನು ಸೇವಿಸುವುದು ಉತ್ತಮವಲ್ಲ. ಕೆಲ ಆಹಾರ ಮಗುವಿನ ಬೆಳವಣಿಗೆಗೆ ಸಹಕಾರಿಯಾದರೆ ಇನ್ನು ಕೆಲ ಆಹಾರ ಸೇವಿಸುವುದರಿಂದ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವ ಆಹಾರವನ್ನು ಸೇವಿಸಬೇಕು ಹಾಗೂ ಯಾವ ಆಹಾರ ಸೇವಿಸಬಾರದು ಎಂದು ಈ ಕೆಳಗೆ ಕೆಲ ಸಲಹೆಗಳನ್ನು ನೀಡಲಾಗಿದೆ.

ಸೇವಿಸಬೇಕಾದ ಆಹಾರ :
• ಪ್ರತಿದಿನ ಮೊಟ್ಟೆಯನ್ನು ಸೇವಿಸಬೇಕು.
• ಹಾಲು, ಮೊಸರನ್ನು ಹೆಚ್ಚಾಗಿ ಬಳಸಬೇಕು.
• ಪಾಲಕ್ ಸೊಪ್ಪು, ಬಸಲೆ ಸೊಪ್ಪಿನಲ್ಲಿ ಕಬ್ಬಿಣಾಂಶ ಇದ್ದು, ಹೆಚ್ಚಾಗಿ ಈ ಸೊಪ್ಪುಗಳನ್ನು ತಿನ್ನಬೇಕು.
• ಮೀನು ಸೇವಿಸುವುದರಿಂದ ಮಕ್ಕಳ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ.
• ಮೊಳಕೆ ಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು.
• ಬಾದಾಮಿ,ಒಣದ್ರಾಕ್ಷಿ, ಗೋಡಂಬಿ, ಪಿಸ್ತಾ, ಅಂಜೂರ ಸೇರಿದಂತೆ ಕೆಲ ಡ್ರೈಫ್ರೂಟ್ಸ್ ಸೇವಿಸುವುದು ಒಳ್ಳೆಯದು ಇದರಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ, ಆಂಟಿ ಆಕ್ಸಿಡೆಂಟ್, ವಿಟಮಿನ್ ಇರುತ್ತದೆ.
• ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು.
• ದಾಳಿಂಬೆ, ಕಿತ್ತಳೆ ಹಣ್ಣು, ಸೇಬು ಸೇರಿದಂತೆ ಹಣ್ಣುಗಳನ್ನು ದಿನನಿತ್ಯ ಸೇವಿಸುವುದು ಉತ್ತಮ.
• ಎಳನೀರನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹದ ಉಷ್ಣತೆ ಕಡಿಮೆ ಮಾಡಬಹುದು.

ಸೇವಿಸಬಾರದ ಆಹಾರ : 
• ಕಳಲೆ ತುಂಬಾ ಉಷ್ಣವಾದ ಆಹಾರವಾಗಿದ್ದು, ಗರ್ಭವಸ್ಥೆಯಲ್ಲಿ ಇದನ್ನು ಸೇವಿಸಿದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ.
• ಪಪ್ಪಾಯ, ಅನಾನಸ್ ಹಣ್ಣುಗಳನ್ನು ಗರ್ಭಿಣಿ ಮಹಿಳೆಯರು ಸೇವಿಸಬಾರದು.
• ಎಲೆಕೋಸನ್ನು ಗರ್ಭಿಣಿ ಮಹಿಳೆಯರು ಸೇವಿಸಬಾರದು.
• ನುಗ್ಗೆ ಸೊಪ್ಪನ್ನು ಗರ್ಭಿಣಿ ಮಹಿಳೆಯರು ಸೇವಿಸುವುದರಿಂದ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ.
• ಹಸಿ ಮೊಟ್ಟೆಯನ್ನು ಗರ್ಭವಸ್ಥೆಯಲ್ಲಿ ಸೇವಿಸಬಾರದು.
• ಜಂಕ್ ಫುಡ್‍ಗಳನ್ನು ಸೇವಿಸಬಾರದು.
• ಹಸಿ ಹಾಲನ್ನು ಕುಡಿಯಬಾರದು.
• ಅರ್ಧ ಬೇಯಿಸಿದ ಯಾವುದೇ ಆಹಾರವನ್ನು ಗರ್ಭಿಣಿ ಮಹಿಳೆಯರು ಸೇವಿಸಬಾರದು.
• ಗರ್ಭವಸ್ಥೆಯಲ್ಲಿ ಎಳ್ಳನ್ನು ಸೇವಿಸಬಾರದು.