ಗುಂಡು ಹಾರಿಸಿಕೊಂಡು ಬಿ.ಎಸ್.ಎಫ್ ಯೋಧ ಆತ್ಮಹತ್ಯೆ…

170
firstsuddi

ಚತ್ತೀಸ್‍ಗಢ : ಗುಂಡು ಹಾರಿಸಿಕೊಂಡು ಬಿ.ಎಸ್.ಎಫ್ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಂಕರ್ ಜಿಲ್ಲೆಯ ಧುರ್ ನಕ್ಸಲ್ ಪೀಡಿತ ಸಂಗಂನಲ್ಲಿ ನಡೆದಿದೆ. ಹರಿಯಾಣದ ನಿವಾಸಿ ಸುರೇಶ್ ಕುಮಾರ್ ಆತ್ಮಹತ್ಯೆಗೆ ಶರಣಾದ ಯೋಧ ಎಂದು ಗುರುತಿಸಲಾಗಿದೆ. ಸಂಗಂನ 157ನೇ ಬೆಟಾಲಿಯನ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಮುಂಜಾನೆ 4ಗಂಟೆ ಸುಮಾರಿಗೆ ತಮ್ಮ ತಂಡದೊಂದಿಗೆ ಕಾರ್ಯಾಚರಣೆ ಮುಗಿಸಿ ಹಿಂದಿರುತ್ತಿದ್ದ ವೇಳೆ ಶಿಬಿರಕ್ಕೆ ಕೇವಲ 100 ಮೀ ದೂರ ಇದ್ದಾಗ ತಮ್ಮ ರೈಫಲ್‍ನಿಂದ ಗುಂಡು ಹಾರಿಸಿಕೊಂಡಿದ್ದು, ಗುಂಡಿನ ಸದ್ದು ಕೇಳಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಯೋಧರು ಕೂಡಲೇ ಅವರನ್ನು ಶಿಬಿರಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಸುರೇಶ್ ಕುಮಾರ್ ಅವರು ಮೃತಪಟ್ಟಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ.