ಗುಜರಾತಿ, ರಾಜಸ್ಥಾನಿಗಳನ್ನು ಹೊರಹಾಕಿದರೆ ಮಹಾರಾಷ್ಟ್ರ ವಾಣಿಜ್ಯ ನಗರವಾಗಿ ಉಳಿಯುವುದಿಲ್ಲ : ರಾಜ್ಯಪಾಲರ ವಿವಾದಾತ್ಮಕ ಹೇಳಿಕೆ…

81
firstsuddi

ಮುಂಬೈ : ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ ಓಡಿಸಿದ್ರೆ, ರಾಜ್ಯದಲ್ಲಿ ಹಣ ಉಳಿಯುವುದಿಲ್ಲ. ಆಗ ಮುಂಬೈಯನ್ನು ಭಾರತದ ಆರ್ಥಿಕ ರಾಜಧಾನಿ ಎಂದು ಕರೆಯಲು ಸಾಧ್ಯವಾಗುವುದಿಲ್ಲ ಎಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಮುಂಬೈನ ಅಂಧೇರಿಯಲ್ಲಿ ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ ಅವರು, ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ, ವಿಶೇಷವಾಗಿ ಮುಂಬೈ ಮತ್ತು ಥಾಣೆಯಿಂದ ಓಡಿಸಿದ್ರೆ, ರಾಜ್ಯದಲ್ಲಿ ಹಣ ಉಳಿಯುವುದಿಲ್ಲ. ಈಗ ಮುಂಬೈಯನ್ನು ದೇಶದ ವಾಣಿಜ್ಯ ರಾಜಧಾನಿ ಎಂದು ಕರೆಯಲಾಗುತ್ತದೆ. ಆಗ ಮುಂಬೈಯನ್ನು ವಾಣಿಜ್ಯ ರಾಜಧಾನಿ ಎಂದು ಕರೆಯಲಾಗುವುದಿಲ್ಲ ಎಂದು ಹೇಳಿದ್ದರು.

ಈ ಹೇಳಿಕೆ ವಿರೋಧಿಸಿದ ಶಿವಸೇನೆ ಮತ್ತು ಕಾಂಗ್ರೆಸ್ ನ ಹಲವಾರು ನಾಯಕರು ಕೊಶ್ಯಾರಿ ಅವರನ್ನು ಟೀಕಿಸಿದ್ದಾರೆ. ಕಷ್ಟಪಟ್ಟು ದುಡಿಯುವ ಮರಾಠಿ ಜನರನ್ನು ರಾಜ್ಯಪಾಲರು ಅವಮಾನಿಸಿದ್ದಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಖಂಡಿಸಿದ್ದಾರೆ. ಬಿಜೆಪಿ ಪ್ರಾಯೋಜಿತ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ಕೂಡಲೇ, ಮರಾಠಿಗರಿಗೆ ಅವಮಾನವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.