ಗುಜರಾತ್‍ನಲ್ಲಿ ಹೆಚ್‍ಎಮ್‍ಪಿವಿ ವೈರಸ್ ಪತ್ತೆ.

22

ಗಾಂಧೀನಗರ: ಕರ್ನಾಟಕದಲ್ಲಿ 2 ಪ್ರಕರಣಗಳ ವರದಿಯಾದ ನಂತರ ಗುಜರಾತ್‍ನಲ್ಲಿ ಮೊದಲ ಹ್ಯೂಮನ್ ಮೆಟಾ ಫ್ನ್ಯೊಮೋ ವೈರಸ್ ಸೋಂಕು ವರದಿಯಾಗಿದೆ. ಚೀನಾದಲ್ಲಿ ಕಾಡುತ್ತಿರುವ ಹೆಚ್‍ಎಮ್‍ಪಿವಿ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನ 2 ಮಕ್ಕಳಲ್ಲಿ ವೈರಸ್ ಪತ್ತೆಯಾಗಿದೆ. ಇದೀಗ ಗುಜರಾತ್‍ನಲ್ಲಿ ಮೊದಲ ಸೋಂಕು ವರದಿಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಕರ್ನಾಟಕದಲ್ಲಿ 2 ಹ್ಯೂಮನ್ ಮೆಟಾ ಫ್ನ್ಯೊಮೋ ವೈರಸ್ ಪ್ರಕರಣಗಳನ್ನು ದೃಢಪಡಿಸಿದ ಕೆಲವೇ ಗಂಟೆಗಳಲ್ಲಿ ಗುಜರಾತ್‍ನಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ. ಇದು ಗುಜರಾತಿನ ಮೊದಲ ಪ್ರಕರಣವಾಗಿದ್ದು, 2 ವರ್ಷದ ಮಗುವಿನಲ್ಲಿ ವೈರಸ್ ದೃಢಪಟ್ಟಿದೆ. ರೋಗಿಯನ್ನು ಅಹಮದಾಬಾದ್‍ನ ಚಂದ್‍ಖೇಡಾ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ. ಈಗಾಗಲೇ ಬೆಂಗಳೂರಿನ 2 ಜನ ಮಕ್ಕಳಲ್ಲಿ ಪತ್ತೆಯಾಗಿದ್ದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ದೃಢಪಡಿಸಿದೆ. 3 ತಿಂಗಳ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, 8 ತಿಂಗಳ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಾಣುತ್ತಿದೆ.