ಗುಜರಾತ್‍ನಲ್ಲಿ ಅ.27ರ ವರೆಗೆ ಸಂಚಾರ ನಿಯಮ ಉಲ್ಲಂಘಿಸಿದರೂ ದಂಡ ವಿಧಿಸಲ್ಲ…

55
firstsuddi

ಗಾಂಧಿನಗರ : ದೀಪಾವಳಿ ಪ್ರಯುಕ್ತ ಅ.21 ರಿಂದ 27ರ ವರೆಗೆ 7 ದಿನಗಳ ಕಾಲ ಸಂಚಾರ ನಿಯಮ ಉಲ್ಲಂಘಿಸಿದರೂ ಸಾರ್ವಜನಿಕರಿಗೆ ದಂಡ ವಿಧಿಸುವುದಿಲ್ಲ ಎಂದು ಗುಜರಾತ್ ಸರ್ಕಾರ ಘೋಷಿಸಿದೆ.

ಈ ಬಗ್ಗೆ ಮಾತನಾಡಿರುವ ಗುಜರಾತ್ ಗೃಹ ಸಚಿವ ಹರ್ಷ ಸಂಘವಿ, ದೀಪಾವಳಿ ಹಬ್ಬದ ದೃಷ್ಟಿಯಿಂದ ಗುಜರಾತ್ ನ ಸಂಚಾರ ಪೊಲೀಸರು ಅಕ್ಟೋಬರ್ 27 ರವರೆಗೆ ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಂದ ಯಾವುದೇ ದಂಡವನ್ನು ಸಂಗ್ರಹಿಸುವುದಿಲ್ಲ ಎಂದು ಹೇಳಿದರು.

ಪೊಲೀಸರು 7 ದಿನ ದಂಡ ವಿಧಿಸಲ್ಲ ಎಂದು ಸಾರ್ವಜನಿಕರು ಸಂಚಾರ ನಿಯಮವನ್ನು ಉಲ್ಲಂಘಿಸಬೇಡಿ. ಪೊಲೀಸರು ದಂಡ ವಿಧಿಸಲ್ಲ ಎಂದರೇ ಸಾರ್ವಜನಿಕರು ಟ್ರಾಫಿಕ್ ನಿಯಮಗಳನ್ನು ಅನುಸರಿಸಬಾರದೆಂದಲ್ಲ. ನೀವು ತಪ್ಪು ಮಾಡಿದರೂ 7 ದಿನ ದಂಡ ಪಾವತಿಸದೆ ತೆರಳಲು ಪೊಲೀಸರು ಅವಕಾಶ ಕೊಡುತ್ತಾರೆ ಅಷ್ಟೇ ಎಂದಿದ್ದಾರೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತವಿರುವ ಗುಜರಾತ್ ನಲ್ಲಿ ಡಿಸೆಂಬರ್ ಅಂತ್ಯದೊಳಗೆ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಹೀಗಾಗಿ ಇದೆಲ್ಲಾ ಚುನಾವಣೆಯ ಗಿಮಿಕ್ ಎಂಬ ಮಾತುಗಳು ಕೇಳಿ ಬರುತ್ತಿವೆ.