ಗುಜರಾತ್‍ನಲ್ಲಿ ಎಕ್ಸ್ಇ ಕೋವಿಡ್ ರೂಪಾಂತರಿ ಪತ್ತೆ…

54
firstsuddi

ಗಾಂಧಿನಗರ : ಕೋವಿಡ್ ರೂಪಾಂತರಿ ಎಕ್ಸ್ಇ ಗುಜರಾತ್ ನ ವಡೋದರದಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಎಕ್ಸ್ಇ ತಳಿ ಪತ್ತೆಯಾದ ವ್ಯಕ್ತಿಯಿಂದ ಸಂಗ್ರಹಿಸಿದ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಈಚೆಗಷ್ಟೇ 53 ವರ್ಷದ ಮಹಿಳೆಯೊಬ್ಬರಲ್ಲಿ ಎಕ್ಸ್ಇ ತಳಿ ಇರುವುದಾಗಿ ವರದಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಇದನ್ನು ನಿರಾಕರಿಸಿತ್ತು.

ಎಕ್ಸ್ಇ ರೂಪಾಂತರವು, ಒಮಿಕ್ರಾನ್ ರೂಪಾಂತರದ ಬಿಎ.1 ಮತ್ತು ಬಿಎ.2 ಉಪವಿಭಾಗಗಳ ಮರುಸಂಯೋಜಕವಾಗಿದೆ. ಇಲ್ಲಿಯವರೆಗೆ, ಜಾಗತಿಕ ಮಟ್ಟದಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳು ದಾಖಲಾಗಿವೆ. ಆದರೆ ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಒಮಿಕ್ರಾನ್‍ನ ಉಪ ರೂಪಾಂತರವಾದ ಬಿಎ.1 ಮತ್ತು ಬಿಎ.2ಗಿಂತಲೂ ಹತ್ತುಪಟ್ಟು ಹೆಚ್ಚು ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.