ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ – ಈಶ್ವರಪ್ಪಗೆ ಮತ್ತೆ ಸಂಕಷ್ಟ ಎದುರು…

46
firstsuddi

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಚಾರ್ಜ್​​ಶೀಟ್ ಸಲ್ಲಿಕೆಯಲ್ಲಿ ಉಲ್ಲೇಖಿಸಲಾಗಿರುವ ಎಲ್ಲಾ ಸಾಕ್ಷ್ಯಗಳನ್ನ ಹಾಜರುಪಡಿಸಲು 42ನೇ ವಿಶೇಷ ನ್ಯಾಯಾಲಯ ಆದೇಶ ನೀಡಿದ್ದು, ಜನವರಿ 31ರೊಳಗೆ ಎಲ್ಲಾ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಸುಪರ್ದಿಗೆ ನೀಡಲು ಸೂಚಿಸಲಾಗಿದೆ.

ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಸಂತೋಷ್ ಪಾಟೀಲ್ ಕುಟುಂಬಸ್ಥರು, ನ್ಯಾಯಾಲಯದ ಮೊರೆ ಹೋಗಿದ್ದರು. ಆ ಸಂದರ್ಭದಲ್ಲಿ ದಾಖಲಾತಿ ನೀಡಿದ್ದ ಉಡುಪಿ ಪೊಲೀಸರು ಸಂಪೂರ್ಣ ದಾಖಲಾತಿ ಸಲ್ಲಿಕೆಗೆ ಹಿಂದೇಟು ಹಾಕಿದ್ದರು. ಇದನ್ನು ಪ್ರಶ್ನಿಸಿ ಮತ್ತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಬಳಿಕ, ನ್ಯಾಯಾಲಯದ ಹೊಸ ಆದೇಶ ಮಾಡಿದೆ.

ಇನ್ನು ಕೆಲವೊಂದು ಸಾಕ್ಷ್ಯಗಳಲ್ಲಿ ಸಂತೋಷ್ ಪಾಟೀಲ್ ಮಾಜಿ ಸಚಿವ ಈಶ್ವರಪ್ಪ ಪಿಎಗೆ ಹಣ ನೀಡಿರುವುದು ವಾಟ್ಸಪ್ ಚಾಟ್ ನಲ್ಲಿ ಬಹಿರಂಗವಾಗಿದೆ.