ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ದರ ಮತ್ತೆ ಏರಿಕೆ…

61
firstsuddi

ನವದೆಹಲಿ : ಜನ ಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಗೃಹ ಬಳಕೆಯ 14.2 ಕೆ.ಜಿ ಎಲ್‍ಪಿಜಿ ಸಿಲಿಂಡರ್ ದರ 50 ರೂಪಾಯಿ ಏರಿಕೆಯಾಗಿದೆ. ಈ ದರವು ಇಂದಿನಿಂದಲೇ ಜಾರಿಗೆ ಬರಲಿದೆ.

ದೆಹಲಿಯಲ್ಲಿ ಸದ್ಯ ಗೃಹ ಬಳಕೆಯ ಪ್ರತಿ ಸಿಲಿಂಡರ್ ದರ 1,053 ರೂ. ಆಗಿದೆ. 5 ಕೆಜಿಯ ಗೃಹ ಬಳಕೆ ಪ್ರತಿ ಸಿಲಿಂಡರ್ ಗೆ 18 ರೂ. ಏರಿಕೆ ಮಾಡಲಾಗಿದ್ದು, 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ 8.50 ರೂ. ಜಾಸ್ತಿಯಾಗಿದೆ.