ನವದೆಹಲಿ : ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ದರ ಮತ್ತೆ ಹೆಚ್ಚಳವಾಗಿದ್ದು, 14.2 ಕೆಜಿ ತೂಕದ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದೆ. ನೂತನ ದರ ಇಂದಿನಿಂದಲೇ ಜಾರಿಗೆ ಬರಲಿದೆ.
ಮಾರ್ಚ್ ನಲ್ಲಿ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಗೆ 50 ರೂಪಾಯಿ ಹೆಚ್ಚಳವಾಗಿತ್ತು. ಇದೀಗ ಮತ್ತೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 50 ರೂ.ಗಳ ಹೆಚ್ಚಳ ಮಾಡಲಾಗಿದ್ದು, ಸದ್ಯ ಅಡುಗೆ ಅನಿಲ ಬೆಲೆ 999.50 ರೂ. ಆಗಿದೆ.










