ಜನಸಾಮಾನ್ಯರಿಗೆ ಶಾಕ್ ; ಎಲ್ ಪಿಜಿ ಸಿಲಿಂಡರ್ ನ ಬೆಲೆ ಮತ್ತೆ ಏರಿಕೆ!

84
firstsuddi

ನವದೆಹಲಿ : ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ತೈಲ ಕಂಪನಿಗಳು ಜನಸಾಮಾನ್ಯರಿಗೆ ಮತ್ತೊಂದು ಶಾಕ್ ನೀಡಿವೆ. ಎಲ್ ಪಿಜಿಯ ಬೆಲೆ ಒಂದು ಸಿಲಿಂಡರ್ ಗೆ 25.50 ರೂ. ಹೆಚ್ಚಳವಾಗಿದೆ. ಇದರಿಂದಾಗಿ ಕೊರೊನಾದಿಂದ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಎಲ್ ಪಿಜಿ ಸಿಲಿಂಡರ್ ಗಳ ಬೆಲೆ 25.50 ರೂ.ಹೆಚ್ಚಿಸಿದ್ದು, ಪ್ರಸ್ತುತ 14.2 ಕೆಜಿ ತೂಕದ ಗೃಹಬಳಕೆ ಸಿಲಿಂಡರ್ ಗಳಿಗೆ ದೆಹಲಿಯಲ್ಲಿ 834.50 ರೂ. ಇದೆ. ಕಳೆದ ಆರು ತಿಂಗಳಲ್ಲಿ ಎಲ್ ಪಿಜಿ ಬೆಲೆ 14.2 ಕೆಜಿ ಸಿಲಿಂಡರ್ ಗೆ 140 ರೂ.ಹೆಚ್ಚಳವಾಗಿದೆ.

ಕೋಲ್ಕತ್ತಾದಲ್ಲಿ 835.50 ರೂ. ಇದ್ದಿದ್ದು, ಈಗ 861 ರೂಪಾಯಿಗೆ ಏರಿಕೆಯಾಗಿದೆ. ಮುಂಬೈಯಲ್ಲಿ 14.2 ಕೆ.ಜಿ ಎಲ್ ಪಿಜಿ ಸಿಲಿಂಡರ್ ಬೆಲೆ 809 ರೂಪಾಯಿ ಇದ್ದಿದ್ದು, ಈಗ 834.50 ರೂಪಾಯಿಗೆ ಏರಿಕೆಯಾಗಿದೆ. ಇನ್ನೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 14.2 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 812 ರೂಪಾಯಿ ಇದ್ದಿದ್ದು, ಈಗ 836.50 ರೂಪಾಯಿಗೆ ಹೆಚ್ಚಳವಾಗಿದೆ.