ಗ್ರೆನೇಡ್ ಸ್ಫೋಟ – ಇಬ್ಬರು ಸೇನಾಧಿಕಾರಿಗಳು ಹುತಾತ್ಮ…

87
firstsuddi

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್ ನಲ್ಲಿ ನಿನ್ನೆ ರಾತ್ರಿ ಆಕಸ್ಮಿಕವಾಗಿ ನಡೆದ ಗ್ರೆನೇಡ್ ಸ್ಫೋಟದಲ್ಲಿ ಇಬ್ಬರು ಸೇನಾಧಿಕಾರಿಗಳು ಹುತಾತ್ಮರಾಗಿದ್ದಾರೆ.

ಕ್ಯಾಪ್ಟನ್ ಆನಂದ್ ಮತ್ತು ಜೆಸಿಒ ನೈಬ್ ಸುಬೇದಾರ್ ಹುತಾತ್ಮ ಸೈನಿಕರು. ಮೆಂಧರ್ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆ ಭಾಗದಲ್ಲಿ ಗಸ್ತು ತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ತಕ್ಷಣವೇ ವಿಮಾನದಲ್ಲಿ ಉಧಂಪುರಕ್ಕೆ ಅವರನ್ನು ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.