ದಾವಣಗೆರೆ : ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು, ಪೊಲೀಸ್ ಇಲಾಖೆ ತನಿಖೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದಿದ್ದಾರೆ.
ನನ್ನ ಮಗನನ್ನು ಪತ್ತೆ ಮಾಡಿದ್ದು ನನ್ನ ಕ್ಷೇತ್ರದ ಜನರು. ಡ್ರೋಣ್ ಮೂಲಕ ನನ್ನ ಮಗನನ್ನು ಹುಡುಕಾಟ ನಡೆಸಿದ್ದಾರೆ. ಆದರೆ ನಿನ್ನೆ ಒಬ್ಬ ಅಧಿಕಾರಿ ಬಂದು ಓವರ್ ಸ್ಪೀಡ್ ನಲ್ಲಿ ಬಂದು ಬಿದ್ದಿದ್ದಾನೆ ಎಂದು ಹೇಳುತ್ತಿದ್ದಾರೆ. ಹಾಗಾದ್ರೆ ಅವನ ಕೈಗೆ ಯಾರು ಹಗ್ಗ ಕಟ್ಟಿದ್ದರು ಹೇಳಿ. ಪೊಲೀಸರ ನಿರ್ಲಕ್ಷ್ಯ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನನ್ನ ರಾಜಕೀಯ ವರ್ಚಸ್ಸು ಸಹಿಸದೇ ಕೆಲ ಶಿಖಂಡಿಗಳು, ಹೇಡಿಗಳು ನನ್ನ ಮಗನನ್ನು ಬಲಿ ಪಡೆದಿದ್ದಾರೆ. ಈ ಪೊಲೀಸ್ ತನಿಖೆಯಿಂದ ನನಗೆ ವಿಶ್ವಾಸ ಇಲ್ಲ. ಅಧಿಕಾರದಲ್ಲಿದ್ದು ನಿಮ್ಮ ಮಗನ ಪ್ರಕರಣದ ತನಿಖೆ ಸರಿಯಾಗಿಲ್ಲ ಎಂದ ಜನರು ಕೇಳುತ್ತಿದ್ದಾರೆ. ಪೊಲೀಸರು ನನ್ನ ಮಗನನ್ನು ರಕ್ಷಣೆ ಮಾಡದವರು ಸಾಮಾನ್ಯ ಜನರನ್ನು ರಕ್ಷಣೆ ಮಾಡುತ್ತಾರಾ ಎಂದು ಪ್ರಶ್ನಿಸಿದರು.










