ಚರಂಡಿ ಸ್ವಚ್ಛಗೊಳಿಸುವಾಗ ವಿಷಾನಿಲ ಸೇವಿಸಿ ಒಂದೇ ಕುಟುಂಬದ 5 ಕಾರ್ಮಿಕರು ಸಾವು…

55
firstsuddi

ಮುಂಬೈ: ಚರಂಡಿ ಸ್ವಚ್ಛಗೊಳಿಸುವಾಗ ವಿಷಾನಿಲ ಸೇವಿಸಿ ಒಂದೇ ಕುಟುಂಬದ 5 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪರಭಾನಿ ಜಿಲ್ಲೆಯಲ್ಲಿ ನಡೆದಿದೆ.

ವರದಿಗಳ ಪ್ರಕಾರ ಗುರುವಾರ ಮಧ್ಯಾಹ್ನ 6 ಕಾರ್ಮಿಕರು ಭೌಚಾ ತಾಂಡಾ ಪ್ರದೇಶದ ಜಮೀನಿನಲ್ಲಿದ್ದ ಚರಂಡಿಯನ್ನು ಸ್ವಚ್ಛ ಮಾಡುತ್ತಿದ್ದ ವೇಳೆ ಐವರು ಕಾರ್ಮಿಕರು ಸಾವಿಗೀಡಾಗಿದ್ದಾರೆ ಎಂಬುದು ತಿಳಿದುಬಂದಿದೆ.

ಮೃತರೆಲ್ಲರನ್ನೂ ಗುರುತಿಸಲಾಗಿದ್ದು, ಒಂದೇ ಕುಟುಂಬದ ಸದಸ್ಯರು ಎಂಬುದು ತಿಳಿದುಬಂದಿದೆ. ಎಲ್ಲರ ಶವಗಳನ್ನೂ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅವರ ಜೊತೆಗಿದ್ದ ಇನ್ನೊಬ್ಬ ಕಾರ್ಮಿಕನ ಸ್ಥಿತಿಯೂ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಸಂತಾಪ ಸೂಚಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ, ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಘೋಷಿಸಿದ್ದಾರೆ.
ವಿಷ ವಾಯು ಉಸಿರಾಟದಿಂದ ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ. ಪರಭಾನಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಘಟನೆ ಬಗ್ಗೆ ತನಿಖೆಯನ್ನು ಮುಂದುವರಿಸಲಾಗಿದೆ.