ಚಾಮರಾಜನಗರ: ಹುಲಿ ದಾಳಿಗೆ ಕುರಿಗಾಹಿ ಬಲಿ…

65
firstsuddi

ಚಾಮರಾಜನಗರ: ಹುಲಿ ದಾಳಿಗೆ ಕುರಿಗಾಹಿಯೊಬ್ಬ ಬಲಿಯಾದ ಘಟನೆ ಇಂದು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ವ್ಯಾಪ್ತಿಯ ಹಾಡಿನಕಣಿವೆ ಬಳಿ ನಡೆದಿದೆ.

ಮೃತರನ್ನು ಬಸವ (50) ಎಂದು ಗುರುತಿಸಲಾಗಿದೆ. ಇವರು ಬುಡಕಟ್ಟು ಜೇನುಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ಕಳೆದ ಎರಡು ದಿನಗಳ ಹಿಂದೆ ಕುರಿ ಮೇಯಿಸಲು ಕಾಡಿಗೆ ತೆರಳಿದ್ದರು. ಈ ವೇಳೆ ಹುಲಿ ದಾಳಿ ಮಾಡಿದೆ. ಕಾಡಂಚಿನಲ್ಲಿ ಇವರ ಮೃತದೇಹ ಅರ್ಧಂಬರ್ಧ ತಿಂದ ಸ್ಥಿತಿಯಲ್ಲಿ ದೊರೆತಿದೆ.

ಸ್ಥಳದಲ್ಲಿ ಬಂಡೀಪುರ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮೃತದೇಹ ಕಾಡಿನಿಂದ ಹೊರತರಲೂ ಅಧಿಕಾರಿಗಳು ಮುಂದಾಗಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.