ಚಿಕ್ಕಮಗಳೂರು : 12 ಅಡಿ ಉದ್ದದ ಹೆಬ್ಬಾವು ಎನ್.ಆರ್. ಪುರ ತಾಲ್ಲೂಕಿನ ಗಡಿಗೇಶ್ವರದ ದಾಸನಗದ್ದೆ ಸಿರಾಜುದ್ದೀನ್ ಎಂಬುವವರ ಅಡಿಕೆ ತೋಟದಲ್ಲಿ ಕಾಣಿಸಿಕೊಂಡಿದ್ದು, ಹೆಬ್ಬಾವನ್ನು ಕಂಡು ತೋಟದ ಮಾಲಿಕರು ಗಾಬರಿಗೊಂಡು ಕೂಡಲೇ ಉರಗ ತಜ್ಞ ಹರೀಂದ್ರ ಅವರಿಗೆ ಮಾಹಿತಿ ನೀಡಿದ್ದು, ಬಳಿಕ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಹರೀಂದ್ರ ಅವರು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಹೆಬ್ಬಾವನ್ನು ಸೆರೆ ಹಿಡಿದು ಎನ್.ಆರ್. ಪುರ ಸಮೀಪದ ಅರಣ್ಯಕ್ಕೆ ಬಿಡಲಾಯಿತು.









