ಚಿಕ್ಕಮಗಳೂರು : SSLC ಪರೀಕ್ಷೆಯಲ್ಲಿ ಶೇ.100 ಅಂಕ ಪಡೆದ ಐ.ಪಿ. ತನ್ಮಯಿ ಹಾಗೂ ನಿವೃತ್ತ ಶಿಕ್ಷಕರಿಗೆ ಶಿಕ್ಷಕರ ವಿವಿದೊದ್ದೇಶ ಸಹಕಾರ ಸಂಘದ ವತಿಯಿಂದ ಸನ್ಮಾನ…

302
firstsuddi

ಚಿಕ್ಕಮಗಳೂರು : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಕ್ಕೆ 100 ರಷ್ಟು ಅಂಕ ಪಡೆದ ಬಾಲಕಿ ಐ.ಪಿ.ತನ್ಮಯಿ ಮತ್ತು ಸೇವೆಯಿಂದ ನಿವೃತ್ತರಾದ ಶಿಕ್ಷಕರನ್ನು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ವಿವಿದೊದ್ದೇಶ ಸಹಕಾರ ಸಂಘ ಹಾಗೂ ಶಿಕ್ಷಕರ ಪ್ರತಿಭಾ ಪರಿಷತ್ ವತಿಯಿಂದ ನಗರದಲ್ಲಿ ಸನ್ಮಾನಿಸಲಾಯಿತು.

ಶಿಕ್ಷಕರ ಭವನದಲ್ಲಿ ನಡೆದ ಸಮಾರಂಭದಲ್ಲಿ ಸೇವೆಯಿಂದ ನಿವೃತ್ತರಾದ 6 ಜನ ಮುಖ್ಯ ಶಿಕ್ಷಕರು ಮತ್ತು 28 ಶಿಕ್ಷಕರನ್ನು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎನ್.ಸುಂದರೇಶ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲಿಗಳಾಗಿರುವ ಐ.ಪಿ.ತನ್ಮಯಿ ಶಿಕ್ಷಕರ ಮಗಳಾಗಿರುವುದು ಆ ಸಮುದಾಯಕ್ಕೆ ಹೆಮ್ಮೆ ತಂದಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ವಿವಿದೊದ್ದೇಶ ಸಹಕಾರ ಸಂಘದ ಅಧ್ಯಕ್ಷ ಪ್ರಭು ಪ್ರಸಾದ್ ಶಿಕ್ಷಕರು ನಿವೃತ್ತರಾದ ನಂತರವೂ ಸಂಘ ಅವರ ಜೊತೆಗಿರುತ್ತದೆ ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಜಯರಾಂ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಮಹೇಶಪ್ಪ, ಉಪಾಧ್ಯಕ್ಷರಾದ ಸಿ.ಎಸ್.ದುಗ್ಗೇಶ್, ಅನ್ನಪೂರ್ಣ ಕಟ್ಟಿಮನಿ, ಖಜಾಂಚಿ ಜ್ಯೋತಿ, ಜೋಗಪ್ಪ, ಚಂದ್ರೇಗೌಡ, ದೈಹಿಕ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ಎಸ್.ಈ.ಲೋಕೇಶ್ವರಾಚಾರ್ ಉಪಸ್ಥಿತರಿದ್ದರು.