ಚಿಕ್ಕಮಗಳೂರು : ಕಿಡಿಗೇಡಿಗಳ ಕ್ರೌರ್ಯಕ್ಕೆ ಲಕ್ಷಾಂತರ ಮೀನುಗಳು ಸಾವು…

169

ಚಿಕ್ಕಮಗಳೂರು : ಕೆರೆಗೆ ವಿಷ ಹಾಕಿ ಕಿಡಿಗೇಡಿಗಳು ಮೀನುಗಳ ಮಾರಣಹೋಮ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲ್ಲೂಕಿನ ವೈ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ತಮ್ಮಯ್ಯ ಎಂಬುವವರು ತಮ್ಮ ಕೆರೆಯಲ್ಲಿ ಸಾಕಿದ್ದ ಲಕ್ಷಾಂತರ ಮೀನುಗಳು ಕಿಡಿಗೇಡಿಗಳ ಕ್ರೌರ್ಯಕ್ಕೆ ಸಾವನ್ನಪ್ಪಿದ್ದು, ಕೆರೆಯಲ್ಲಿ ಮೀನುಗಳು ತೇಲುತ್ತಿರುವುದನ್ನು ಕಂಡು ತಮ್ಮಯ್ಯ ಅವರು ಕಣ್ಣೀರಿಟ್ಟಿದ್ದಾರೆ. ಈ ಕುರಿತು ಸಿಂಗಟಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.