ಚಿಕ್ಕಮಗಳೂರು : ಕೊರೊನಾ ವೈರಸ್ ತಡೆಗಟ್ಟಲು ಶೃಂಗೇರಿ ಶಾರದಾ ಮಠದಿಂದ ಪ್ರಧಾನಿ ಪರಿಹಾರ ನಿಧಿಗೆ 10 ಲಕ್ಷ ರೂ ದೇಣಿಗೆ…

430
firstsuddi

ಚಿಕ್ಕಮಗಳೂರು : ಮಹಾಮಾರಿ ಕೊರೊನಾ ವೈರಸ್‍ನ ಆತಂಕದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿರುವ ಹಿನ್ನೆಲೆ, ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಜಿಲ್ಲೆಯ ಶೃಂಗೇರಿ ಮಠದ ಸಿಬ್ಬಂದಿ ಹಾಗೂ ಸಿ.ಐ.ಐ.ಆರ್.ಸಿ ಸಿಬ್ಬಂದಿಯಿಂದ ಪ್ರಧಾನಿ ಪರಿಹಾರ ನಿಧಿಗೆ 10 ಲಕ್ಷ ಪರಿಹಾರ ನಿಧಿಯನ್ನು ನೀಡಲಾಗಿದೆ. ಹಾಗೂ ಸಾರ್ವಜನಿಕರು ಕೂಡಾ ತಮ್ಮ ಶಕ್ತಿಗನುಸಾರವಾಗಿ ಪ್ರಧಾನಿ ಪರಿಹಾರ ನಿಧಿಗೆ ಸಹಾಯ ಮಾಡುವಂತೆ ವಿ.ಆರ್ ಗೌರಿಶಂಕರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಶೃಂಗೇರಿ ತಾಲ್ಲೂಕಿನ ಜನರಿಗೆ ಮಠದಿಂದಲೇ ಊಟದ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯವಿರುವವರಿಗೆ ಮಠದಿಂದ ಮೂರು ಹೊತ್ತು ಊಟದ ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.