ಚಿಕ್ಕಮಗಳೂರು : ಕೊರೊನಾಗೆ ಯುವಕ ಬಲಿ…

851
firstsuddi

ಚಿಕ್ಕಮಗಳೂರು : ಕೊರೊನಾಗೆ ಯುವಕನೋರ್ವ ಬಲಿಯಾಗಿರುವ ಘಟನೆ ಜಿಲ್ಪಾಸ್ಪತ್ರೆಯಲ್ಲಿ ನಡೆದಿದೆ. ಜಿಲ್ಲೆಯ ಬಾರ್ ಲೈನ್ ರೋಡ್ ನಿವಾಸಿಯಾದ ಮದೀನ್ (30) ಮೃತಪಟ್ಟ ವ್ಯಕ್ತಿ. ಮದೀನ್ ಅವರು ಕಳೆದ 13 ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 4 ಗಂಟೆಗೆ ಸಾವನ್ನಪ್ಪಿದ್ದಾರೆ. ಮೃತ ಮದೀನ್ ಅವರ ಪತ್ನಿ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಕಳೆದ ವಾರ ಇವರ ತಾಯಿಯೂ ಕೂಡ ಕೊರೊನಾಗೆ ಬಲಿಯಾಗಿದ್ದರು. ರಂಜಾನ್ ಹಬ್ಬದ ಸಂಭ್ರಮ ನೆಲೆಸಬೇಕಿದ್ದ ಮನೆಯಲ್ಲೀಗ ಸೂತಕದ ಛಾಯೆ ಮನೆ ಮಾಡಿದೆ.