ಚಿಕ್ಕಮಗಳೂರು : ಟ್ರ್ಯಾಕ್ಟರ್ ಚಲಾಯಿಸಿ ಉಳುಮೆ ಮಾಡಿದ ಸಚಿವ ಸಿ.ಟಿ. ರವಿ.

389

ಚಿಕ್ಕಮಗಳೂರು : ಮಹಾಮಾರಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್‍ಡೌನ್ ಮಾಡಿದ್ದು, ಕೆಲವು ಸಚಿವರು ಹಾಗೂ ಶಾಸಕರೂ ಕ್ಷೇತ್ರದಲ್ಲೇ ಇಲ್ಲ. ಈ ಮಧ್ಯೆ ಕ್ಷೇತ್ರದ ಅಭಿವೃದ್ಧಿ ಜೊತೆ, ಕೊರೋನ ನಿಯಂತ್ರಣಕ್ಕೆ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿರುವ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಅವರು ಬಿಡುವಿನ ವೇಳೆಯಲ್ಲಿ ಅಪ್ಪಟ ರೈತನಾಗಿದ್ದಾರೆ. ನಗರದ ರಾಮನಹಳ್ಳಿಯಲ್ಲಿ ಇರುವ ತಮ್ಮ ಫಾರಂ ಹೌಸ್‍ನಲ್ಲಿ ಟ್ರ್ಯಾಕ್ಟರ್ ಏರಿ ಒಂದು ಗಂಟೆಗಳ ಕಾಲ ಭೂಮಿಯನ್ನು ಹದ ಮಾಡಿದ್ದಾರೆ. ನಿನ್ನೆ ನಗರದಲ್ಲಿ ಉತ್ತಮ ಮಳೆಯಾಗಿದ್ದು, ಭೂಮಿ ಕೂಡ ಹಸಿಯಾಗಿರುವುದರಿಂದ ತಾವೇ ಟ್ರ್ಯಾಕ್ಟರ್ ಏರಿ ಭೂಮಿಯನ್ನು ಹದ ಮಾಡಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿರುವ ಸಚಿವ ಸಿ.ಟಿ.ರವಿ ಅವರು ನಗರದ ನಿರಾಶ್ರಿತರು ಹಾಗೂ ಬಡವರಿಗೆ ಆಹಾರದ ಸಾಮಗ್ರಿ ಕೂಡ ವಿತರಿಸಿದ್ದು, ಜಿಲ್ಲೆಯ ಬೇರೆ-ಬೇರೆ ತಾಲೂಕಿಗೂ ಭೇಟಿ ನೀಡಿ, ಕೊರೋನ ನಿಯಂತ್ರಣಕ್ಕೆ ಹಾಗೂ ಜಿಲ್ಲೆಗೆ ಬಾರದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.