ಚಿಕ್ಕಮಗಳೂರು: ಟ್ರ್ಯಾಕ್ಟರ್ ಹರಿದು ಚಾಲಕ ಸಾವು.

248
ಚಿಕ್ಕಮಗಳೂರು : ಟ್ರ್ಯಾಕ್ಟರ್ ಹರಿದು ಚಾಲಕ ಮೃತಪಟ್ಟಿರುವ ಘಟನೆ ತರೀಕೆರೆ ತಾಲೂಕಿನ ಎರೆಹಳ್ಳಿ ಗ್ರಾಮದಲ್ಲಿ ನಡೆದಿದೆ.    ಮೃತರನ್ನು ದೋರನಾಡು ಗ್ರಾಮದ 31 ವರ್ಷದ ಕಿರಣ್ ಎಂದು ಗುರುತಿಸಲಾಗಿದೆ. ರಸ್ತೆ ಕಾಮಗಾರಿಗೆ ಮಣ್ಣನ್ನ ತುಂಬಿಕೊಂಡು ಹೋಗುವಾಗ ಟ್ರ್ಯಾಕ್ಟರಿನ ಟೈರ್ ಗುಂಡಿಗೆ ಇಳಿದಾಗ ಟ್ರ್ಯಾಕ್ಟರ್ ಓಡಿಸುತ್ತಿದ್ದ ಚಾಲಕ ಟ್ರ್ಯಾಕ್ಟರ್‍ನಿಂದ ಹಾರಿ ಬಿದಿದ್ದಾನೆ. ಮೂವಿಂಗ್‍ನಲ್ಲಿದ್ದ ಟ್ರ್ಯಾಕ್ಟರ್ ಚಾಲಕನ ಮೇಲೆ ಹರಿದಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.