ಚಿಕ್ಕಮಗಳೂರು : ಡಿ.ಕೆ.ಶಿವಕುಮಾರ್ ಅವರು ಕೊರೋನಾ ಸೋಂಕಿನಿಂದ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದ ಯುವ ಕಾಂಗ್ರೇಸ್ ಕಾರ್ಯಕರ್ತರು…

246

ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೊರೋನಾ ಸೋಂಕಿನಿಂದ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿ ಯುವ ಕಾಂಗ್ರೇಸ್ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯಕರ್ತರು ಸೋಮವಾರ ನಗರದ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.
ಸಮಿತಿಯ ಅಧ್ಯಕ್ಷ ರಾಹಿಲ್ ಶರೀಫ್ ಅವರ ನೇತೃತ್ವದಲ್ಲಿ ಶ್ರೀ ಬೋಳರಾಮೇಶ್ವರ ದೇವಾಲಯ, ಮಹಾತ್ಮ ಗಾಂಧಿ ರಸ್ತೆಯ ಶ್ರೀ ಗಣಪತಿ ದೇವಾಲಯ, ಅಜರ್ ಷಾ ಅಲಿ ದರ್ಗಾ, ಯಕೀಮ್ ಷಾ ಅಲಿ ದರ್ಗಾ, ಕ್ರೈಸ್ತ ಸಮುದಾಯದ ಪ್ರಧಾನ ದೇವಾಲಯ ಮತ್ತು ಕ್ಯಾಥೋಲಿಕ್ ಚರ್ಚ್‍ಗಳಿಗೆ ತೆರಳಿದ ಕಾರ್ಯಕರ್ತರು ಪೂಜೆ ಸಲ್ಲಿಸಿ ಡಿ.ಕೆ.ಶಿ ಅವರು ಶೀಘ್ರ ಗುಣಮುಖರಾಗುವಂತೆ ಸಾಮೂಹಿಕವಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಹಿಲ್ ಶರೀಫ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜ್ಯ ಕಾಂಗ್ರೇಸ್‍ನ ಶಕ್ತಿ ಮತ್ತು ಆಧಾರ ಸ್ತಂಭವಾಗಿದ್ದಾರೆ, ಯುವ ಕಾರ್ಯಕರ್ತರಿಗೆ ಸ್ಪೂರ್ತಿಯಾಗಿರುವ ಅವರು ಗುಣಮುಖರಾಗಿ ಬಂದಲ್ಲಿ ಪಕ್ಷದ ಅಭಿವೃದ್ದಿಗೆ ಸಹಕಾರಿಯಾಗುತ್ತದೆ ಎಂದರು.
ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಸಂಚಾಲಕ ಎನ್.ಎಸ್.ಚೇತನ್, ಐ.ಟಿ.ವಿಭಾಗದ ಅಧ್ಯಕ್ಷ ಕಾರ್ತಿಕ್ ಜಿ.ಚೆಟ್ಟಿಯಾರ್, ಜಿಲ್ಲಾ ಯುವ ಕಾಂಗ್ರೇಸ್ ಉಪಾಧ್ಯಕ್ಷ ಜೆ.ವಿನಾಯಕ, ಕಾರ್ಯದರ್ಶಿಗಳಾದ ಸಿ.ಸಿ.ಮಧು, ಹರ್ಷವರ್ಧನ್, ನಗರ ಪ್ರಧಾನ ಕಾರ್ಯದರ್ಶಿ ಧೃವಕುಮಾರ್, ಕಾರ್ಯದರ್ಶಿ ಆಕಾಶ್, ಸುನೀಲ್, ವಸಂತ, ಚಂದ್ರು, ಶಿವು ಹಾಜರಿದ್ದರು.