ಚಿಕ್ಕಮಗಳೂರು : ದ್ವಿತೀಯ ಪಿಯುಸಿ ಫಲಿತಾಂಶ- ಎಂಇಎಸ್ ಕಾಲೇಜಿಗೆ ಶೇ.91 ರಷ್ಟು ಫಲಿತಾಂಶ…

169
firstsuddi

ಚಿಕ್ಕಮಗಳೂರು : ನಗರದ ಮಲೆನಾಡು ವಿದ್ಯಾಸಂಸ್ಥೆಯ ಎಸ್‍ಎಸ್‍ಎಂ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 91 ರಷ್ಟು ಫಲಿತಾಂಶ ಗಳಿಸಿದೆ. 305 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 275 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ, 44 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ, ವಿಜ್ಞಾನ ವಿಭಾಗದಲ್ಲಿ ಶೇ.97, ವಾಣಿಜ್ಯದಲ್ಲಿ ಶೇ.95, ಕಲಾ ವಿಭಾಗದಲ್ಲಿ ಶೇ.59 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕೆ.ಎಂ.ಆಶಾ 577, ವಾಣಿಜ್ಯದಲ್ಲಿ ಟಿ.ಶ್ರಿಯಾಂಕ 585 ಹಾಗೂ ಕಲಾ ವಿಭಾಗದಲ್ಲಿ ಎನ್.ಫರ್ಹಾನ 543 ಅಂಕ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯೆ ಎಂ.ಬಿ.ಜಯಶ್ರೀ ತಿಳಿಸಿದ್ದಾರೆ.