ಚಿಕ್ಕಮಗಳೂರು : ಮಗನಿಂದಲೇ ತಂದೆಯ ಬರ್ಬರ ಹತ್ಯೆ…

179
firstsuddi

ಚಿಕ್ಕಮಗಳೂರು : ಮಗನೇ ತನ್ನ ತಂದೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲ್ಲೂಕಿನ ಮಾಚಗೊಂಡನಹಳ್ಳಿಯಲ್ಲಿ ನಡೆದಿದೆ. ತಮ್ಮೇಗೌಡ(70) ಮೃತ ದುರ್ದೈವಿ ಹಾಗೂ ಆರೋಪಿ ಮಗನನ್ನು ಸತೀಶ್ ಎಂದು ಗುರುತಿಸಲಾಗಿದೆ. ಆರೋಪಿ ಸತೀಶ್ ಅವರು ಖಾಸಗಿ ಬ್ಯಾಂಕ್‍ನಿಂದ ಟ್ರ್ಯಾಕ್ಟರ್‍ಗೆ ಸಾಲ ಪಡೆದಿದ್ದರು. ಸಾಲ ಹಿಂದಿರುಗಿಸದ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿಗಳು ಮನೆಗೆ ತೆರಳಿದ್ದಾರೆ. ಇದರಿಂದ ತಂದೆ ತಮ್ಮೇಗೌಡ ಅವರು ಪುತ್ರನ ಬಳಿ ಕೇಳಿದ್ದಾರೆ. ಇದರಿಂದ ಕೋಪಗೊಂಡ ಪುತ್ರ ಸತೀಶ್ ಅವರು ತಂದೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದು, ಈ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.