ಚಿಕ್ಕಮಗಳೂರು : ರಕ್ತದಾನ ಅತೀ ಶ್ರೇಷ್ಠದಾನ ಆದರಿಂದ ಸಾಧ್ಯವಾದಷ್ಟು ರಕ್ತದಾನ ಮಾಡಿ : ಹೆಚ್.ಟಿ ಚಂದ್ರೇಗೌಡ…

208
firstsuddi

ಚಿಕ್ಕಮಗಳೂರು : ರಕ್ತದಾನ ಎಂಬುವುದು ಅತೀ ಶ್ರೇಷ್ಠದಾನ ಮತ್ತು ಮನುಷ್ಯನ ಜೀವ ಉಳಿಸುವಲ್ಲಿ ನೆರವಾಗುತ್ತದೆ. ಆದರಿಂದ ಸಾಧ್ಯವಾದಷ್ಟು ರಕ್ತದಾನ ಮಾಡಿ ಜನರಿಗೆ ಸಕಾಲದಲ್ಲಿ ನೆರವು ನೀಡಬೇಕು ಎಂದು ಸಮಾಜ ಸೇವಕರಾದ ಶ್ರೀ ಹೆಚ್.ಟಿ ಚಂದ್ರೇಗೌಡರು ಹೇಳಿದ್ದಾರೆ. ಅವರು ಕೈಮರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಚಿಕ್ಕಮಗಳೂರಿನ ನಿರಂತರ ಸೇವಾ ಸಂಸ್ಥೆಯು ಆಯೋಜಿಸಿದ್ದ ರಕ್ತದಾನ ಮತ್ತು ಉಚಿತ ರಕ್ತದೊತ್ತಡ ಮಧು ಮೇಹ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅನೇಕ ಸಂದರ್ಭಗಳಲ್ಲಿ ಮನುಷ್ಯನ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ಪ್ರತಿ ಜಿಲ್ಲೆಯಲ್ಲು ರಕ್ತ ನಿಧಿ ಘಟಕಗಳು ಇವೆ. ಸಾರ್ವಜನಿಕರು ಮುಕ್ತವಾಗಿ ರಕ್ತದಾನ ಮಾಡಿದರೆ ಯಾರೋ ರೋಗಿಗೆ ಸಹಾಯ ಮಾಡಿದಂತಾಗುತ್ತದೆ. ಇಂತಹ ಶಿಬಿರಗಳ ಮೂಲಕ ಇವುಗಳ ಬಗ್ಗೆ ಜನಜಾಗೃತಿ ಬೆಳೆಯುವಂತಾಗಬೇಕು. ಮತ್ತು ಜನರು ಶಿಬಿರಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ಶಾಂತಕುಮಾರ್ ಅವರು ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳು ಬಡ ಜನರಿಗೆ ಅತ್ಯಂತ ಸಹಾಯವಾಗುತ್ತದೆ. ನಿರಂತರ ಇಂತಹ ಸಂಸ್ಥೆಗಳು ಜನಪರ ಕಾರ್ಯಗಳಲ್ಲಿ ತೊಡಗಿದೆ ಎಂದು ನುಡಿದರು. ಮುಖ್ಯ ಅತಿಥಿಗಳಾಗಿ ಡಾ: ಮುರುಳೀಧರ್, ವೈದ್ಯರಾದ ಪ್ರತ್ಯಕ್ಷ ಭೈರವ, ಶ್ರೀ ರಾಘವೇದ್ರ, ಶ್ರೀ ಪರಮೇಶ್ವರ್, ಕೇಶವ ಮೂರ್ತಿ ಮುಂತಾದವರು ಭಾಗವಹಿಸಿದ್ದರು. ಸ್ವಾಗತ ಭಾಷಣವನ್ನು ರಾಮ್ರಾಜ್, ನಿರಂತರ ಸೇವಾ ಸಂಸ್ಥೆ ಅಧ್ಯಕ್ಷರು ಮಾಡಿದರು, ನಿರೂಪಣೆಯನ್ನು ಪೂರ್ಣೇಶ್ ಮತ್ತು ವಂದನಾರ್ಪಣೆ ಕುಮಾರ್ ಸ್ವಾಮಿ ಹೆಚ್.ಡಿ ನಿರಂತರ ಸೇವಾ ಸಂಸ್ಥೆ ನಡೆಸಿಕೊಟ್ಟರು. ಈ ಶಿಬಿರಕ್ಕೆ ಜಿಲ್ಲಾ ರಕ್ತನಿಧಿ ಘಟಕ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಎನ್.ಸಿ.ಡಿ ಕ್ಲಿನಿಕ್, ಜಿಲ್ಲಾ ಆಸ್ಪತ್ರೆ ಇವರುಗಳು ಸಹಕಾರ ನೀಡಿದರು. ಈ ವೇಳೆ ನೂರಾರು ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿ ರಕ್ತದಾನ ಮಾಡಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡರು.