ಚಿಕ್ಕಮಗಳೂರು : ಶ್ರೀ ಕರುಮಾರಿಯಮ್ಮ ದೇವಾಲಯದ ಜಾತ್ರ ಮಹೋತ್ಸವ ಆಚರಣೆ…

375
firstsuddi

ಚಿಕ್ಕಮಗಳೂರು:- ನಗರದ ತಮಿಳು ಕಾಲೋನಿಯ ಶ್ರೀ ಕರುಮಾರಿಯಮ್ಮ ದೇವಾಲಯದ ಜಾತ್ರ ಮಹೋತ್ಸವವು ಶ್ರದ್ದಾಭಕ್ತಿಯಿಂದ ಜರುಗಿತು.
ಇಂದು ಬೆಳಿಗ್ಗೆ ಹೋಮ, ಹವನ, ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು.
ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಮೇ.5 ರಂದು ಮಧ್ಯಾಹ್ನ 12 ರಿಂದ 5 ರವರೆಗೆ ಶ್ರೀ ಅಮ್ಮನವರ ಕರಗ ಮೆರವಣಿಗೆಯೊಂದಿಗೆ ವಿಸರ್ಜಿಸಲಾ ಗುವುದು ಎಂದು ದೇವಾಲಯ ಸಮಿತಿ ತಿಳಿಸಿದೆ.