ಚಿಕ್ಕಮಗಳೂರು : ಸ್ನೇಹಿತರೊಂದಿಗೆ ನಾಲೆಯಲ್ಲಿ ಸ್ನಾನಕ್ಕೆ ಇಳಿದ ಯುವಕ ನೀರುಪಾಲು…

205
firstsuddi

ಚಿಕ್ಕಮಗಳೂರು : ಸ್ನೇಹಿತರೊಂದಿಗೆ ನಾಲೆಯಲ್ಲಿ ಸ್ನಾನಕ್ಕೆ ಇಳಿದ ಯುವಕ ನೀರುಪಾಲಾಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ದೊರನಾಳು ಬಳಿ ನಡೆದಿದೆ. ವಿಶ್ವಾಸ್(22) ನೀರುಪಾಲಾದ ಯುವಕ. ಯುವಕ ವಿಶ್ವಾಸ್ ಇಂದು ಬೆಳಿಗ್ಗೆ ತನ್ನ ನಾಲ್ವರು ಸ್ನೇಹತರೊಡನೆ ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಸ್ನಾನ ಮಾಡಲು ಇಳಿದಿದ್ದು, ಈ ವೇಳೆ ಯುವಕ ನೀರಿನಲ್ಲಿ ಮುಳುಗುತ್ತಿದ್ದನ್ನು ಗಮನಸಿದ ಯುವಕನ ನಾಲ್ವರು ಸ್ನೇಹಿತರೂ ಯುವಕನ ರಕ್ಷಣೆಗೆ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನ ರಕ್ಷಿಸಲು ನಾಲೆ ಮೇಲಿದ್ದ ಯುವಕರು ಆತನಿಗೆ ಹಗ್ಗ ಎಸೆಯಲು ಮುಂದಾಗಿದ್ದಾರೆ. ಹರಿಯುತ್ತಿದ್ದ ನೀರಿನಲ್ಲಿ ವಿಶ್ವಾಸ್ ಕೊಚ್ಚಿಕೊಂಡು ಮುಂದಕ್ಕೆ ಹೋಗುತ್ತಿದ್ದ ಪರಿಣಾಮ ಆತನಿಗೆ ಸರಿಯಾಗಿ ಹಗ್ಗ ಕೊಡಲು ಸಾಧ್ಯವಾಗದ ಪರಿಣಾಮ ವಿಶ್ವಾಸ್ ಸ್ನೇಹಿತರ ಕಣ್ಣೆದುರಲ್ಲೇ ನೀರಲ್ಲಿ ಮುಳುಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳೀಯರ ಸಹಾಯದೊಂದಿಗೆ ಶೋಧಕಾರ್ಯ ನಡೆಸಿ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಕುರಿತು ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.