ಚಿಕ್ಕಮಗಳೂರು : ಹಲಸಿನ ಹಣ್ಣಿನಲ್ಲಿ ವಿಷ ಬೆರಸಿ ಹಸುಗಳನ್ನು ಕೊಂದ ದುಷ್ಕರ್ಮಿಗಳು…

136
firstsuddi

ಚಿಕ್ಕಮಗಳೂರು : ಕೇರಳದಲ್ಲಿ ಅನಾನಸ್‍ನಲ್ಲಿ ಸ್ಪೋಟಕ ಇಟ್ಟು ಗರ್ಭಿಣಿ ಆನೆಯೊಂದನ್ನು ಕೊಂದ ಘಟನೆ ಮಾಸುವ ಮುನ್ನವೇ ಹಲಸಿನ ಹಣ್ಣಿಗೆ ವಿಷವನ್ನು ಬೆರಸಿ ಹಸುಗಳನ್ನು ಕೊಂದಿರುವ ಅಮಾನವೀಯ ಘಟನೆ ತಾಲ್ಲೂಕಿನ ಬಸರವಳ್ಳಿ ಗ್ರಾಮದಲ್ಲಿ ನಡೆದಿದೆ. ಹಸುಗಳು ತೋಟಕ್ಕೆ ಬೇಕಾಬಿಟ್ಟಿ ನುಗ್ಗುತ್ತವೆ ಎಂಬ ಕಾರಣಕ್ಕೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ವಿಷಪೂರಿತ ಹಣ್ಣನ್ನು ಸೇವಿಸಿದ ಕಿಟ್ಟೇಗೌಡ ಹಾಗೂ ಮಧು ಎಂಬುವವರಿಗೆ ಸೇರಿದ ಮೂರು ಹಸುಗಳು ಮೃತಪಟ್ಟಿದ್ದು, ಈ ಕುರಿತು ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.