ಚೀನಾದಲ್ಲಿ ನಡೆಯಬೇಕಿದ್ದ ಏಷ್ಯನ್ ಗೇಮ್ಸ್ ಮುಂದೂಡಿಕೆ…

62
firstsuddi

ಬೀಜಿಂಗ್ : 2022ರ ಸೆಪ್ಟೆಂಬರ್ ತಿಂಗಳಲ್ಲಿ ಚೀನಾದಲ್ಲಿ ನಡೆಯಬೇಕಿದ್ದ ಏಷ್ಯನ್ ಗೇಮ್ಸ್ ಇದೀಗ ಮುಂದೂಡಿಕೆಯಾಗಿದೆ.

19ನೇ ಏಷ್ಯನ್ ಗೇಮ್ಸ್ ಚೀನಾದ ಹಾಂಗ್ಝೌ ನಲ್ಲಿ ಸೆಪ್ಟೆಂಬರ್ 10ರಿಂದ 25ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಇದೀಗ ಮುಂದೂಡಿಕೆಯಾಗಿದ್ದು, ಹೊಸ ದಿನಾಂಕ ಮುಂದಿನ ದಿನಗಳಲ್ಲಿ ಪ್ರಕಟವಾಗಲಿದೆ. ಕ್ರೀಡಾಕೂಟವನ್ನು ಮುಂದೂಡಿರುವುದಕ್ಕೆ ಯಾವುದೇ ನಿರ್ಧಿಷ್ಟ ಕಾರಣಗಳನ್ನು ನೀಡದಿದ್ದರೂ, ಕೋವಿಡ್ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿರುವುದೇ ಕಾರಣ ಎಂದು ತಿಳಿದು ಬಂದಿದೆ.

ಹಾಂಗ್ಝೌ ಶಾಂಘೈ ಸಮೀಪದಲ್ಲೇ ಇದ್ದು, ಶಾಂಘೈನಲ್ಲಿ ಕೊರೊನಾ ಹಾವಳಿ ಮಿತಿಮೀರಿದೆ. ಈ ಹಿನ್ನಲೆಯಲ್ಲಿ ಶಾಂಘೈನಲ್ಲಿ ಈಗಾಗಲೇ ಭಾಗಶಃ ಲಾಕ್ ಡೌನ್ ಹೇರಲಾಗಿದೆ.