ಚುನಾವಣೆಗೂ ಮುನ್ನ ಕಾಂಗ್ರೆಸ್‍ಗೆ ಹಿನ್ನಡೆ – ಹಿಮಾಚಲ ಪ್ರದೇಶದಲ್ಲಿ 26 ನಾಯಕರು ಬಿಜೆಪಿ ಸೇರ್ಪಡೆ…

64
firstsuddi

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಚುನಾವಣೆಗೆ ಇನ್ನೂ ನಾಲ್ಕು ದಿನ ಬಾಕಿ ಇದೆ. ಈ ನಡುವೆ ಕಾಂಗ್ರೆಸ್ ನ 26 ನಾಯಕರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡಿದ್ದಾರೆ. ನಾಯಕರನ್ನು ಸಿಎಂ ಜೈರಾಮ್ ಠಾಕೂರ್ ಪಕ್ಷಕ್ಕೆ ಬರ ಮಾಡಿಕೊಂಡರು.

ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಧರಂಪಾಲ್ ಠಾಕೂರ್, ಮಾಜಿ ಕಾರ್ಯದರ್ಶಿ ಆಕಾಶ್ ಸೈನಿ, ಮಾಜಿ ಕೌನ್ಸಿಲರ್ ರಾಜನ್ ಠಾಕೂರ್, ಮಾಜಿ ಜಿಲ್ಲಾ ಉಪಾಧ್ಯಕ್ಷ ಅಮಿತ್ ಮೆಹ್ತಾ, ಮೆಹರ್ ಸಿಂಗ್ ಕನ್ವರ್, ಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ನೇಗಿ, ಜೈ ಮಾ ಶಕ್ತಿ ಸಮಾಜ ಸಂಸ್ಥಾನದ ಅಧ್ಯಕ್ಷ ಜೋಗಿಂದರ್ ಬಿಜೆಪಿಗೆ ಸೇರಿದ್ದಾರೆ. ಇವರೊಂದಿಗೆ ಠಾಕೂರ್, ನರೇಶ್ ವರ್ಮಾ, ಚಮ್ಯಾನ ವಾರ್ಡ್ ಸದಸ್ಯ ಯೋಗೇಂದ್ರ ಸಿಂಗ್, ಟ್ಯಾಕ್ಸಿ ಯೂನಿಯನ್ ಸದಸ್ಯ ರಾಕೇಶ್ ಚೌಹಾಣ್, ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ ಶಿಮ್ಲಾ ಅಧ್ಯಕ್ಷ ಧರ್ಮೇಂದ್ರ ಕುಮಾರ್, ವೀರೇಂದ್ರ ಶರ್ಮಾ, ರಾಹುಲ್ ರಾವತ್, ಸೋನು ಶರ್ಮಾ, ಅರುಣ್ ಕುಮಾರ್, ಶಿವಂ ಕುಮಾರ್ ಮತ್ತು ಗೋಪಾಲ್ ಠಾಕೂರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.