ಚುನಾವಣೆಯಲ್ಲಿ ಸೋತರೂ ಶೆಟ್ಟರನ್ನು ಎಂಎಲ್​ಸಿ ಮಾಡಿದ್ದೆವು, ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಯಾವುದೇ ಅನ್ಯಾಯ ಆಗಿಲ್ಲ: ಸಿಎಂ ಸಿದ್ದರಾಮಯ್ಯ.

48
firstsuddi

ಮಡಿಕೇರಿ: ನಾವು ಅವರಿಗೆ ಟಿಕೆಟ್ ಕೊಟ್ಟಿದ್ದೆವು. ಚುನಾವಣೆಯಲ್ಲಿ ಸೋತರೂ ಶೆಟ್ಟರನ್ನು ಎಂಎಲ್​ಸಿ ಮಾಡಿದ್ದೆವು. ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಯಾವುದೇ ಅನ್ಯಾಯ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಕೊಡಗಿನ ವಿರಾಜಪೇಟೆ ಸಮೀಪದ ಅಂಬಟ್ಟಿಯ ಗಾಲ್ಫ್ ಮೈದಾನದಲ್ಲಿ ಮಾತಾನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದೆ ಬಿಜೆಪಿ ವಂಚಿಸಿದೆ ಎಂದು ಹೇಳಿ ಅವರು ಕಾಂಗ್ರೆಸ್ ಗೆ ಬಂದರು. ಪಕ್ಷವು ಅವರಿಗೆ ಟಿಕೆಟ್ ನೀಡಿತು. ಸ್ವ-ಕ್ಷೇತ್ರದಲ್ಲೇ ಅವರು ಸೋತರು. ಆದರೂ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಲಾಯಿತು ಎಂದರು.

ಕಾಂಗ್ರೆಸ್ ಪಕ್ಷದಿಂದ ಅವರಿಗೆ ಯಾವುದೇ ಅನ್ಯಾಯ ಆಗಿಲ್ಲ. ಆದರೆ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವ ವಿಚಾರ ಗೊತ್ತಾಗಿಲ್ಲ. ಇತ್ತೀಚೆಗೆ ನನ್ನ ಬಳಿ ಮಾತನಾಡಿದ್ದಾಗಲೂ ಅವರು ಬಿಜೆಪಿ ನನಗೆ ಅನ್ಯಾಯ ಮಾಡಿದೆ. ವಾಪಸ್ ಆ ಪಕ್ಷಕ್ಕೆ ಹೋಗುವುದಿಲ್ಲ ಎಂದಿದ್ದರು. ಅಷ್ಟು ನನಗೆ ಗೊತ್ತು ಮತ್ತೆ ಅವರು ನನಗೆ ಸಿಕ್ಕಿಲ್ಲ ಎಂದು ಹೇಳಿದರು.

ಒಂದು ತಿಂಗಳ ಹಿಂದೆ ಸುರ್ಜೆವಾಲಾ ಬಂದ ದಿನ ಸಿಕ್ಕಿದ್ರು. ಹತ್ತು ದಿನದ ಹಿಂದೆ ಅವರು ಮೀಟಿಂಗ್ ನಲ್ಲಿ ಸಿಕ್ಕಿದ್ರು. ಆಗಲೂ ಅವರು ಏನೂ ಹೇಳಿಲ್ಲ ಎಂದರು.