ವಿಜಯಪುರ : ಜಮೀನು ಮಾರಲು ಒಪ್ಪದ ಪತ್ನಿ ಮೇಲಿನ ಕೋಪಕ್ಕೆ ಪತಿಯೊಬ್ಬ ತನ್ನ ಇಬ್ಬರು ಮಕ್ಕಳಿಗೆ ಎಗ್ರೈಸ್ನಲ್ಲಿ ವಿಷ ಬೆರೆಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಗೋನಾಳ ಎಸ್.ಹೆಚ್.ಗ್ರಾಮದಲ್ಲಿ ನಡೆದಿದೆ.
ಚಂದ್ರಶೇಖರ ಅಗಸನಾಳ ಎಂಬಾತನೆ ತನ್ನ ಮಕ್ಕಳಾದ ಶಿವರಾಜ್ ಹಾಗೂ ಮಗಳು ರೇಣುಕಾಗೆ ಎಗ್ ರೈಸ್ ನಲ್ಲಿ ವಿಷ ಹಾಕಿ ಕೊಲ್ಲಲು ಯತ್ನಿಸಿದ ಆರೋಪಿಯಾಗಿದ್ದಾನೆ. ಘಟನೆಯಲ್ಲಿ ಎರಡೂವರೆ ವರ್ಷದ ಶಿವರಾಜ್ ಅರಸನಾಳ ಸಾವನ್ನಪ್ಪಿದ್ದು, 5 ವರ್ಷದ ರೇಣುಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವಳ ಸ್ಥಿತಿ ಗಂಭೀರವಾಗಿದೆ.
ಚಂದ್ರಶೇಖರ ವಿಪರೀತ ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸಲು ಅವರ ಸ್ವಂತ ಊರು ನಿಡಗುಂದಿ ತಾಲೂಕಿನ ಇಟಗಿ ಗ್ರಾಮದಲ್ಲಿದ್ದ ಹೊಲ ಮಾರಲು ಮುಂದಾಗಿದ್ದ. ಇದಕ್ಲೆ ಸಾವಿತ್ರಿ ಒಪ್ಪದಿದ್ದಾಗ ಕುಪಿತಗೊಂಡು ಎಗ್ ರೈಸ್ ನಲ್ಲಿ ವಿಷ ಹಾಕಿ ಮಗ ಹಾಗೂ ಮಗಳಿಗೆ ಉಣ್ಣಿಸಿದ್ದಾನೆ. ಈಗಾಗಲೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










