ಜಯಲಲಿತಾ ಸಾಕು ಪುತ್ರ ವಿ.ಎನ್. ಸುಧಾಕರನ್ ಜೈಲಿನಿಂದ ಬಿಡುಗಡೆ…

101
firstsuddi

ಆನೇಕಲ್ : ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಜೈಲು ಶಿಕ್ಷೆಗೆ ಗುರಿಯಾಗಿದ್ದ ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಸಾಕು ಪುತ್ರ ವಿ.ಎನ್ ಸುಧಾಕರನ್ ಅವರು ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಐದು ವರ್ಷಗಳ ಜೈಲು ಶಿಕ್ಷೆಯ ನಂತರ ಸುಧಾಕರನ್ ಜೈಲಿನಿಂದ ಬಿಡುಗಡೆಯಾಗಿದ್ದು, ಸುಧಾಕರನ್ ರಿಲೀಸ್ ಆಗುತ್ತಿದ್ದಂತೆ ಬೆಂಬಲಿಗರು ಸುಧಾಕರನ್ ಪರವಾಗಿ ಘೋಷಣೆ ಕೂಗಿ ಬರಮಾಡಿಕೊಂಡಿದ್ದಾರೆ.

ಚಿನ್ನಮ್ಮ ಶಶಿಕಲಾ ನಟರಾಜನ್ ಜೊತೆಯೇ ಸುಧಾಕರನ್ ಬಿಡುಗಡೆ ಆಗಬೇಕಿತ್ತು. ಆದರೆ ದಂಡ ಪಾವತಿಸಿದ ಹಿನ್ನೆಲೆ ಒಂದು ವರ್ಷ ಹೆಚ್ಚು ಕಾಲ ಜೈಲು ವಾಸವನ್ನು ಅನುಭವಿಸಬೇಕಾಯಿತು.