ಜೈಪುರ್ : ಒಂದೇ ಹುಡುಗಿಯನ್ನು ಪ್ರೀತಿಸಿ ಪ್ರಾಣ ಬಿಟ್ಟ ಸಹೋದರರು..!

91
Firstsuddi

ಜೈಪುರ್ : ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಸಹೋದರರಿಬ್ಬರು ಚಲಿಸುವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಗುಡ್ಲಾ ಪ್ರದೇಶದ ಬಳಿ ನಡೆದಿದೆ.

ಮೃತರನ್ನು ಕೇಶವಪುರ ನಿವಾಸಿಗಳಾದ ಮಹೇಂದ್ರ ಗುರ್ಜಾರ್(23) ಹಾಗೂ ದೇವರಾಜ್ ಗುರ್ಜಾರ್(23) ಎಂದು ಗುರುತಿಸಲಾಗಿದೆ.

ಈ ಇಬ್ಬರು ಸಹೋದರರು ಸಾಯುವ ಮನ್ನ ವೀಡಿಯೋ ಮಾಡಿದ್ದು, ಈ ಘಟನೆಗೆ ನಾವು ಯಾರನ್ನು ಹೊಣೆ ಮಾಡುವುದಿಲ್ಲ. ನನ್ನ ಸಾವಿಗೆ ಅವನನ್ನು ದೂಷಿಸುವುದಾಗಲೀ, ಅವನ ಸಾವಿಗೆ ನನ್ನನ್ನು ದೂಷಿಸುವುದಾಗಲೀ ಮಾಡಬೇಡಿ. ಈ ನಿರ್ಧಾರವನ್ನು ನಾವು ವ್ಯಯಕ್ತಿಕವಾಗಿ ತೆಗೆದುಕೊಂಡಿದ್ದೇವೆ. ಎಂದು ತಿಳಿಸಿದ್ದಾರೆ.

ವೀಡಿಯೋ ಕೊನೆಯಲ್ಲಿ ತಮ್ಮ ಕುಟುಂಬಸ್ಥರಿಗೆ ಕರೆ ಮಾಡಿ ನಮ್ಮ ಸಾವಿನಿಂದಾಗಿ ಯಾವುದೇ ಗೊಂದಲಗಳು ಬೇಡ. ನೀವೂ ಮೊದಲಿನಂತೆಯೇ ಚೆನ್ನಾಗಿರಿ, ನಾವಿಬ್ಬರು ಪ್ರಿತಿಸುತ್ತಿದ್ದ ಹುಡುಗಿಗೆ ಒಳ್ಳೆ ಸಂಬಂಧವನ್ನು ನೋಡಿ ವಿವಾಹವಾಗುವಂತೆ ಹೇಳಿ. ಎಂಬ ಮಾಹಿತಿ ತಿಳಿದು ಬಂದಿದೆ. ಡಬ್ಲಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.