ವಿಜಯಪುರ : ಸುಧಾಕರ್ ಅವರು, ರಮೇಶ್ ಕುಮಾರ್ ಡಿಸಿಸಿ ಬ್ಯಾಂಕ್ ನ ಬ್ರಹ್ಮಾಂಡ ಭ್ರಷ್ಟಾಚಾರವನ್ನ ಬಯಲಿಗೆ ಎಳೆಯುತ್ತೇನೆ ಎಂದು ಪರೋಕ್ಷವಾಗಿ ಜೈಲಿಗೆ ಹಾಕಿಸೋವರೆಗೂ ನಾನು ವಿರಮಿಸೋದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾನು ಈ ದೇಶದ ಪ್ರಜೆ, ಕಾನೂನನ್ನು ಗೌರವಿಸುತ್ತೇನೆ. ಸರ್ಕಾರ ಅಂದ ಮೇಲೆ ಅವರು ಯೋಚನೆ ಮಾಡಿಯೇ ಮಾತಾಡಿರ್ತಾರೆ. ಜೈಲಿಗೆ ಕಳಿಸೋ ವ್ಯವಸ್ಥೆ ಅವರು ಮಾಡಿದ್ರೆ, ಹೋಗೋಕೆ ನಾ ಸಿದ್ಧವಾಗಿದ್ದೇನೆ. ಅವರ ಕೆಲಸ ಅವರು ಮುಂದುವರೆಸಲಿ, ಸರ್ಕಾರ ನಡೆಸುವವರು ಹೀಗೆ ಮಾಡ್ತೀವಿ ಅಂದ್ರೆ ಅವರ ಬಳಿ ಸರಿಯಾದ ಸಾಕ್ಷ್ಯಾಧಾರ ಇರಬೇಕು. ಜೈಲಿಗೆ ಹೋಗೋ ಸ್ಥಿತಿ ಬಂದಾಗ ನಾನು ಹೋಗೋಕೆ ಸಿದ್ಧವಾಗಿದ್ದೇನೆ, ನಂದೇನು ತಕರಾರಿಲ್ಲ ಎಂದರು.
ಆರ್‌ಎಸ್‌ಎಸ್ ಟೀಕಾ ಪ್ರಹಾರ ವಿಚಾರವಾಗಿ ಮಾತನಾಡಿ, ನಾನೊಬ್ಬ ಸಾಮಾನ್ಯ ಮನುಷ್ಯ, ಏನೋ ಗ್ರಹಚಾರಕ್ಕೆ ರಾಜಕೀಯಕ್ಕೆ ಬಂದಿರುತ್ತೇವೆ. ಜನಾ ನಮಗೊಂದು ಅವಕಾಶ ಕೊಟ್ಟಿರುತ್ತಾರೆ. ದೊಡ್ಡದೊಡ್ಡವರ ವಿಚಾರಕ್ಕೆಲ್ಲಾ ನಾನು ಮಾತನಾಡುವುದಿಲ್ಲ. ಅದೊಂದು ಸಂಘಟನೆ, ಅವರ ಪಾಡಿಗೆ ಅವರಿದ್ದಾರೆ. ಹೇಳಬೇಕಾದ ಅಗತ್ಯ ಬಂದಾಗ ಹೇಳುತ್ತೇನೆ ಎಂದರು.










