ಭಾರೀ ಟೀಕೆಗೆ ಗುರಿಯಾದ ಬೆನ್ನಲ್ಲೇ ಬಾಲಕನ ಬಳಿ ಕ್ಷಮೆ ಕೋರಿದ ದಲೈ ಲಾಮಾ.

47
firstsuddi

ನವದೆಹಲಿ : ಟಿಬೆಟಿಯನ್ ಆಧ್ಯಾತ್ಮಿಕ ಧರ್ಮಗುರು ದಲೈ ಲಾಮಾ ಅಪ್ರಾಪ್ತ ಬಾಲಕನೊಬ್ಬನಿಗೆ ತಮ್ಮ ನಾಲಿಗೆ ನೆಕ್ಕುವಂತೆ ಸೂಚಿಸಿ ಭಾರೀ ಟೀಕೆಗೆ ಒಳಗಾಗಿದ್ದರು. ಇದೀಗ ಬಾಲಕ ಹಾಗೂ ಆತನ ಕುಟುಂಬದ ಬಳಿ ಕ್ಷಮೆ ಕೇಳಿದ್ದಾರೆ.

ಸಾರ್ವಜನಿಕವಾಗಿ ಮತ್ತು ಕ್ಯಾಮರಾಗಳ ಮುಂದೆ ತಮ್ಮನ್ನು ಭೇಟಿಯಾಗುವ ಮಕ್ಕಳ ಜೊತೆಗೆ ತಮಾಷೆಯಾಗಿ ನಡೆದುಕೊಳ್ಳುವುದು ಸಹಜ. ನಾನು ನಡೆದುಕೊಂಡ ರೀತಿಯಿಂದ ನೋವುಂಟಾಗಿದ್ದರೆ, ಬಾಲಕ, ಆತನ ಕುಟುಂಬ ಮತ್ತು ವಿಶ್ವದ ಎಲ್ಲ ಸ್ನೇಹಿತರಲ್ಲೂ ಕ್ಷಮೆ ಕೋರುವೆ. ಘಟನೆಗೆ ನಾನು ವಿಷಾದಿಸುತ್ತೇನೆ ಎಂದು ದಲೈಲಾಮಾ ಅವರು ಹೇಳಿದ್ದಾರೆ.

ಘಟನೆ ಏನು?
ಕಾರ್ಯಕ್ರಮವೊಂದರಲ್ಲಿ ದಲೈ ಲಾಮಾ ಅವರ ಆಶೀರ್ವಾದ ಪಡೆಯಲು ಬಂದ ಬಾಲಕನ ಚುಂಬಿಸಿದ್ದ ಧರ್ಮಗುರುಗಳು ಬಳಿಕ ನಾಲಿಗೆಯನ್ನು ಸ್ಪರ್ಶಿಸಲು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಧರ್ಮಗುರುಗಳ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.