ಡಿ.ಕೆ. ಶಿವಕುಮಾರ್ ಅವರನ್ನು ಇಡಿ ತನಿಖೆಗೆ ಒಳಪಡಿಸಿರುವುದು ದುರುದ್ದೇಶದಿಂದ ಕೂಡಿದೆ : ಧ್ರುವ ನಾರಾಯಣ್…

258
firstsuddi

ಮೈಸೂರು : ಡಿ.ಕೆ. ಶಿವಕುಮಾರ್ ಅವರನ್ನು ಇಡಿ ತನಿಖೆಗೆ ಒಳಪಡಿಸಿರುವುದು ದುರುದ್ದೇಶದಿಂದ ಕೂಡಿದೆ ಎಂದು ಮಾಜಿ ಸಂಸದ ಧ್ರುವ ನಾರಾಯಣ್ ಅವರು ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರನ್ನು ತೇಜೋವಧೆ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಡಿಕೆಶಿ ಅವರನ್ನು ನಾನು 1983ರಿಂದ ನೋಡುತ್ತಿದ್ದೇನೆ. ಜಿ.ಪಂ ಸದಸ್ಯನಾದಾಗನಿಂದಲೂ ಗಣಿಗಾರಿಕೆ ಮಾಡುತ್ತಿದ್ದಾರೆ. ಹೀಗೆ ಗಣಿಗಾರಿಕೆ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಿಂದ ಹಣ ಸಂಪಾದನೆ ಮಾಡಿದ್ದರು. ಜೊತೆಯಲ್ಲಿ ರಾಮದಾಸ್ ಹಾಗು ಸಾ.ರಾ ಮಹೇಶ್ ಅವರು ಕೂಡ ಗಣಿಗಾರಿಕೆಯಲ್ಲಿ ಹಣ ಸಂಪಾದನೆ ಮಾಡಿದ್ದಾರೆ. ಡಿಕೆಶಿ ವಿರುದ್ಧ ತನಿಖೆ ಆಗಲಿ ಬೇಡ ಎಂದು ಹೇಳುತ್ತಿಲ್ಲ ಆದರೆ ದುದ್ದೇಶದಿಂದ ಮಾಡುವುದು ಬೇಡ. ವಿರೋಧ ಪಕ್ಷಗಳನ್ನು ಸದೆಬಡಿದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಅಧಿಕಾರ ನಡೆಸುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರನ್ನು ಹೈ ಕಮಾಂಡ್ ಹೆದರಿಸುತ್ತಿದ್ದಾರೆ. ಯಾರಾದರೂ ಇದರ ಬಗ್ಗೆ ಧ್ವನಿ ಎತ್ತಿದರೆ ರಾಜೀನಾಮೆ ಪಡೆಯುತ್ತಾರೆ. ರಾಜ್ಯ ಕಾಂಗ್ರೆಸ್‍ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಡಿ.ಕೆ ಶಿವಕುಮಾರ್ ಅವರ ವಿರುದ್ಧದ ಇಡಿ ತನಿಖೆ ಬಗ್ಗೆ ನಾಯಕರು ಖಂಡಿಸಿದ್ದಾರೆ ಎಂದು ಹೇಳಿದರು.