ತರಬೇತಿ ನಿರತ ವಿಮಾನ ಪತನ-ಇಬ್ಬರು ಪೈಲಟ್‍ಗಳು ಸಾವು…

170
firstsuddi

ಒಡಿಶಾ : ತರಬೇತಿ ನಿರತ ವಿಮಾನವೊಂದು ಪತನವಾಗಿ ಇಬ್ಬರು ಪೈಲಟ್‍ಗಳು ಮೃತಪಟ್ಟಿರುವ ಘಟನೆ ಧೆಂಕನಲ್ ಜಿಲ್ಲೆಯ ಕಂಕಡಹಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಬೀರಾಸಲ್ ಏರ್‍ಸ್ಟ್ರಿಪ್‍ನಲ್ಲಿ ನಡೆದಿದೆ. ತಮಿಳುನಾಡು ಮೂಲದ ಅನಿಸ್ ಫಾತಿಮಾ ಹಾಗೂ ಬಿಹಾರ ಮೂಲದ ಕ್ಯಾಪ್ಟನ್ ಸಾಜಿದ್ ಕುಮಾರ್ ಮೃತ ಪೈಲಟ್‍ಗಳಾಗಿದ್ದು, ಬೀರಾಸಲ್ ಸರ್ಕಾರಿ ವಾಯುಯಾನ ತರಬೇತಿ ಸಂಸ್ಥೆಯಲ್ಲಿ ತರಬೇತಿ ನಡೆಯುತ್ತಿದ್ದ ವೇಳೆ ವಿಮಾನ ಪತನವಾಗಿದ್ದು, ಪರಿಣಾಮ ಟ್ರೈನಿ ಪೈಲಟ್ ಅನಿಸ್ ಫಾತಿಮ ಹಾಗೂ ತರಬೇತಿ ನೀಡುತ್ತಿದ್ದ ಕ್ಯಾಪ್ಟನ್ ಸಾಜಿದ್ ಕುಮಾರ್ ಅವರು ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಘಟನೆ ಕುರಿತ ತನಿಖೆಗೆ ಆದೇಶಿಸಿದ್ದಾರೆ.