ತಾಜ್‍ಮಹಲ್‍ನ 22 ಕೊಠಡಿಗಳ ರಹಸ್ಯ ; ಅರ್ಜಿ ವಜಾಗೊಳಿಸಿದ ಕೋರ್ಟ್…

55
firstsuddi

ಲಕ್ನೋ : ತಾಜ್ ಮಹಲ್ ನಲ್ಲಿ ಮುಚ್ಚಲ್ಪಟ್ಟಿರುವ 22 ಕೊಠಡಿಗಳ ಬಾಗಿಲು ತೆರೆಯುವಂತೆ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.

ತಾಜ್ ಮಹಲ್ ನಲ್ಲಿರುವ 22 ಕೊಠಡಿಗಳಲ್ಲೇನಿದೆ ಎಂಬುದನ್ನು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಬಿಜೆಪಿ ಯುವ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್ ಅವರು ಅಲಹಾಬಾದ್ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಅಲಹಾಬಾದ್ ನ ದ್ವಿಸದಸ್ಯ ಪೀಠ, ಯಾವುದೇ ಹಕ್ಕುಗಳ ಉಲ್ಲಂಘನೆಯಾಗದ ಹೊರತು ಕೊಠಡಿಗಳನ್ನು ತೆರೆಯಲು ಆದೇಶ ನೀಡಲು ಸಾಧ್ಯವಿಲ್ಲ. ನಾವು ಯಾವ ರೀತಿಯ ತೀರ್ಪು ನೀಡಬೇಕೆಂದು ನೀವು ಬಯಸುತ್ತೀರಿ? ತಾಜ್ ಮಹಲ್ ನಿರ್ಮಿಸಿದವರು ಯಾರು? ಐತಿಹಾಸಿಕ ಸಂಗತಿಗಳಿಗೆ ಹೋಗಬೇಡಿ. ಹಕ್ಕುಗಳನ್ನು ಉಲ್ಲಂಘಿಸಿದಾಗ ಮಾತ್ರ ಪ್ರಶ್ನಿಸಬಹುದು. ನಿಮ್ಮ ಯಾವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರಿಗೆ ಕೋರ್ಟ್ ಪ್ರಶ್ನಿಸಿದೆ.

ತಾಜ್ ಮಹಲ್ ಬಗ್ಗೆ ಪ್ರಶ್ನೆ ಎತ್ತಿದ್ದೀರಿ ಮುಂದೊಂದು ದಿನ ಹೈಕೋರ್ಟ್ ನ ಕೋರ್ಟ್ ಚೇಂಬರ್ ಒಳಗೆ ಏನಿದೆ ಎಂದು ಕೇಳುತ್ತೀರಿ ಎಂದು ಛೀಮಾರಿ ಹಾಕಿ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.