ಬೆಂಗಳೂರು : ದರೋಡೆ ಮಾಡಲು ಸಂಚು ರೂಪಿಸಿದ್ದ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಾಗರಾಜ್, ನಂದನ್, ಶ್ರೇಯಸ್, ಕೆವಿನ್ ಹಾಗೂ ಪ್ರೇಮ್‍ಕುಮಾರ್ ಎಂದು ಗುರುತಿಸಲಾಗಿದ್ದು, ಇವರು ರಾತ್ರಿ ವೇಳೆ ಓಡಾಡುವವರನ್ನು ತಡೆದು ಹಲ್ಲೆ ನಡೆಸಿ ಅವರಿಂದ ಚಿನ್ನಾಭರಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದರು. ಅದರಂತೆ ನಿನ್ನೆ ರಾತ್ರಿಯೂ ಕೂಡಾ ಯಲಹಂಕದ ಅಳ್ಳಾಳಸಂದ್ರದ ಕೆರೆ ಬಳಿ ದರೋಡೆಗೆ ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ತಿಳಿದ ಸಿಸಿಬಿ ಪೊಲೀಸರು ಕೂಡಲೇ ಕಾರ್ಯಪವೃತ್ತರಾಗಿ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸುತ್ತಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.










