ಬೆಂಗಳೂರು : ದುರ್ಗಾದೇವಿ ಪೂಜೆಗೆ ಸಂಬಂಧಿಸಿದಂತೆ ಬಿಬಿಎಂಪಿ, ನಗರಕ್ಕೆ ಪ್ರತ್ಯೇಕ ಗೈಡ್ ಲೈನ್ ಬಿಡುಗಡೆ ಮಾಡಿದೆ.
ದುರ್ಗಾ ಪೂಜೆಗೆ ಅವಕಾಶ ಕೊಡಬೇಕು ಎಂದು ಬಿಬಿಎಂಪಿಗೆ ಅರ್ಜಿ ಸಲ್ಲಿಸಲಾಗಿತ್ತು. ಈಗ ಬಿಬಿಎಂಪಿ ಅನುಮತಿ ನೀಡಿ, ಈ ಕೆಳಗಿನ ಮಾರ್ಗಸೂಚಿಗಳನ್ನು ಪಾಲಿಸುವಂತೆ ಹೇಳಿದೆ.
ವಾರ್ಡ್ ಗೆ ಒಂದೇ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. 4 ಅಡಿ ಮೀರದಂತೆ ದುರ್ಗಾದೇವಿ ಮೂರ್ತಿ ಇರಬೇಕು. ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆಗೆ ಮುನ್ನ ಸ್ಥಳವನ್ನು ಸ್ಯಾನಿಟೈಸ್ ಮಾಡಬೇಕು. ದರ್ಶನದ ವೇಳೆ ಗರಿಷ್ಠ 100 ಮಂದಿಗೆ ಅವಕಾಶ ನೀಡಲಾಗಿದೆ. ವಾರ್ಡಿನಲ್ಲಿ ವಲಯ ಜಂಟಿ ಆಯುಕ್ತರಿಂದ ಅನುಮತಿ ಪಡೆದು ವಾರ್ಡ್ ಗೆ ಒಂದೇ ಮೂರ್ತಿ ಕೂರಿಸಬೇಕು. ದುರ್ಗಾದೇವಿ ಪ್ರಾರ್ಥನೆ ವೇಳೆ 50 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಡಿಜೆ ಸಂಗೀತ ನಿಷೇಧ, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ, ವಿಸರ್ಜನೆ ವೇಳೆ 10 ಜನ ಕ್ಕಿಂತ ಮೀರಬಾರದು. ದುರ್ಗಾದೇವಿಯನ್ನು ಕೂರಿಸಲು 5 ದಿನ ಮಾತ್ರ ಅವಕಾಶ ನೀಡಲಾಗಿದೆ.










