ದೆಹಲಿ ಅಬಕಾರಿ ನೀತಿ ಹಗರಣ : ವೈಎಸ್ಆರ್ ಕಾಂಗ್ರೆಸ್ ಸಂಸದನ ಪುತ್ರನನ್ನ ಬಂಧಿಸಿದ ಇಡಿ.

41
firstsuddi

ಹೈದರಾಬಾದ್ : ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವೈಎಸ್ ಆರ್ ಕಾಂಗ್ರೆಸ್ ನ ಒಂಗೋಲ್ ಕ್ಷೇತ್ರದ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರ ಮಗ ರಾಘವ್ ಮಾಗುಂಟ ಅವರನ್ನು ಬಂಧಿಸಿದ್ದಾರೆ.

ನಿನ್ನೆ ಸಂಜೆ ರಾಘವ್ ಮಾಗುಂಟ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಬಂಧಿಸಲಾಗಿದೆ. ಅವರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ.

ಈ ಪ್ರಕರಣದಲ್ಲಿ ರಾಘವ್ ಮಾಗುಂಟನನ್ನು ಇಡಿ 9ನೇ ಆರೋಪಿಯಾಗಿ ಬಂಧಿಸಿದೆ. ಈ ವಾರದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಶಿರೋಮಣಿ ಅಕಾಲಿ ದಳದ ಶಾಸಕ ದೀಪ್ ಮಲ್ಹೋತ್ರಾ ಅವರ ಪುತ್ರ ಗೌತಮ್ ಮಲ್ಹೋತ್ರಾ ಮತ್ತು ಜಾಹೀರಾತು ಕಂಪನಿ ಚಾರಿಯಟ್ ಪ್ರೊಡಕ್ಷನ್ ಪ್ರೈವೆಟ್ ಲಿಮಿಟೆಡ್ ನಿರ್ದೇಶಕ ರಾಜೇಶ್ ಜೋಶಿಯನ್ನು ಇ.ಡಿ ಬಂಧಿಸಿದೆ.