ದೆಹಲಿ ವಿಮಾನ ನಿಲ್ದಾಣದಲ್ಲಿ 45 ಪಿಸ್ತೂಲ್ ಪತ್ತೆ ; ದಂಪತಿ ಅರೆಸ್ಟ್…

69
firstsuddi

ನವದೆಹಲಿ : ಅಕ್ರಮವಾಗಿ 45 ಪಿಸ್ತೂಲ್ ಗಳನ್ನು ಸಾಗಿಸುತ್ತಿದ್ದ ದಂಪತಿಯನ್ನು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತರನ್ನ ಜಗಜಿತ್ ಸಿಂಗ್ ಮತ್ತು ಆತನ ಪತ್ನಿ ಜಸ್ವಿದರ್ ಕೌರ್ ಎಂದು ಗುರುತಿಸಲಾಗಿದೆ.ಇವರು ಜುಲೈ 10ರಂದು ವಿಯೆಟ್ನಾನಿಂದ ಭಾರತಕ್ಕೆ ಮರಳಿದ್ದರು. ಈ ವೇಳೆ ತಪಾಸಣೆಗೊಳಪಡಿಸಿದಾಗ ಇಷ್ಟೊಂದು ಪಿಸ್ತೂಲ್ ಪತ್ತೆಯಾಗಿವೆ. ಪಿಸ್ತೂಲ್ ಗಳ ಒಟ್ಟು ಮೌಲ್ಯ 22.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದನಾ ನಿಗ್ರಹ ಘಟಕ ರಾಷ್ಟ್ರೀಯ ಭದ್ರತಾ ಪಡೆ(ಎನ್ ಎಸ್ ಜಿ) ತನಿಖೆ ನಡೆಸುತ್ತಿದ್ದು, ಪಿಸ್ತೂಲ್ ಗಳ ನಕಲಿ, ಅಸಲಿಯತೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಬಂಧಿತ ದಂಪತಿಗಳು ಈ ಹಿಂದೆ ಸಹ ಟರ್ಕಿಯಿಂದ 25 ಪಿಸ್ತೂಲ್ ಭಾರತಕ್ಕೆ ತಂದಿರುವುದಾಗಿ ಒಪ್ಪಿಕೊಂಡಿದ್ದಾರೆ.