ನವದೆಹಲಿ : 2012ರಲ್ಲಿ ದೆಹಲಿಯ ಛಾವಾಲಾ ಪ್ರದೇಶದಲ್ಲಿ 19 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಮೂವರು ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದೆ.
2012ರಲ್ಲಿ 19 ವರ್ಷದ ಯುವತಿಯನ್ನು ಮೂವರು ಅಪಹರಿಸಿ, ಅತ್ಯಾಚಾರ ಮಾಡಿದ್ದಾರೆ. ನಂತರ ಕಬ್ಬಿಣದ ರಾಡ್, ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಂದು ಶವವನ್ನು ಹರಿಯಾಣದ ರೇವಾರಿ ಜಿಲ್ಲೆಯ ರೋಧೈ ಗ್ರಾಮದ ಹೊಲದಲ್ಲಿ ಎಸೆದು ವಿಕೃತಿ ಮೆರೆದಿದ್ದರು. ಈ ಸಂಬಂಧ ದೆಹಲಿಯ ಛಾವಾಲಾ (ನಜಾಫ್‌ಗಢ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2014ರ ಆಗಸ್ಟ್ 26ರಂದು ರಾಹುಲ್, ರವಿಕುಮಾರ್ ಹಾಗೂ ವಿನೋದ್ ಎಂಬ ಮೂವರು ಅಪರಾಧಿಗಳಿಗೆ ದೆಹಲಿ ಹೈಕೋರ್ಟ್ ಮರಣ ದಂಡನೆ ವಿಧಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಪ್ರಕರಣದಿಂದ ಅಪರಾಧಿಗಳನ್ನು ಖುಲಾಸೆಗೊಳಿಸಿದೆ.










