ದೆಹಲಿಯ ಶಾಲೆಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ…

50
firstsuddi

ನವದೆಹಲಿ: ದಕ್ಷಿಣ ದೆಹಲಿಯ ಶಾಲೆಯೊಂದಕ್ಕೆ ಇಂದು ಬೆಳಗ್ಗೆ ಬೆದರಿಕೆ ಮೇಲ್ ಬಂದಿದೆ ಎಂದು ಹೇಳಲಾಗಿದೆ.

ಪುಷ್ಪ ವಿಹಾರ್ ಪ್ರದೇಶದಲ್ಲಿರುವ ಅಮೃತ ಶಾಲೆಗೆ ಬೆಳಗ್ಗೆ 6:35ರ ವೇಳೆಗೆ ಬೆದರಿಕೆಯ ಮೇಲ್ ಬಂದಿದ್ದು, ನಂತರ ಶಾಲೆಯ ಆಡಳಿತ ಪೊಲೀಸರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿದೆ. ತಕ್ಷಣ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಜೊತೆಗೆ ಅಂಬುಲೆನ್ಸ್ ಕೂಡಾ ಸ್ಥಳಕ್ಕೆ ತಲುಪಿದೆ.

ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಶಾಲೆಯ ಕಟ್ಟಡದಿಂದ ಖಾಲಿ ಮಾಡುವಂತೆ ತಿಳಿಸಲಾಗಿದೆ. ಶಾಲೆಯ ಆವರಣದಲ್ಲಿ ಇದೀಗ ತೀವ್ರ ಶೋಧ ನಡೆಸಲಾಗುತ್ತಿದೆ.

ಹದಿನೈದು ದಿನಗಳ ಹಿಂದಷ್ಟೇ ಮಥುರಾ ರಸ್ತೆಯಲ್ಲಿರುವ ‘ದಿ ಡೆಲ್ಲಿ ಪಬ್ಲಿಕ್ ಸ್ಕೂಲ್’ (ಡಿಪಿಎಸ್) ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಮೇಲ್ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ಶಾಲೆಯನ್ನು ತೆರವುಗೊಳಿಸಿ ಕಾರ್ಯಚರಣೆ ನಡೆಸಿದ್ದರು. ಆದರೆ ಶಾಲೆಯ ಆವರಣದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ. ಕೆಲ ಅಪ್ರಾಪ್ತ ವಿದ್ಯಾರ್ಥಿಗಳು ಕೇವಲ ತಮಾಷೆಗಾಗಿ ಬೆದರಿಕೆ ಕರೆ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದರು.