ದೇಶ ವಿರೋಧಿ ಪೋಸ್ಟ್ – ಸೌದಿ ಅರೇಬಿಯಾ ಮಹಿಳೆಗೆ 45 ವರ್ಷ ಜೈಲು ಶಿಕ್ಷೆ!

46
firstsuddi

ರಿಯಾದ್ : ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಪೋಸ್ಟ್ ಹಾಕಿದ ಆರೋಪದ ಮೇಲೆ ಸೌದಿ ಅರೇಬಿಯಾದ ಸ್ಥಳೀಯ ನ್ಯಾಯಾಲಯವು ಮಹಿಳೆಯೊಬ್ಬರಿಗೆ 45 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ನೌರಾ ಬಿಂಟ್ ಸಯೀದ್ ಅಲ್ ಖಹ್ತಾನಿ ಎಂಬಾಕೆ ಸೌದಿ ಅರೇಬಿಯಾದ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯಾಗಿದ್ದಾರೆ. ಮಹಿಳೆ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಸರಿ ಸುಮಾರು ಅರ್ಧ ಶತಮಾನಗಳ ಕಾಲ ಜೈಲಿನಲ್ಲಿ ಇರುವಂತೆ ಶಿಕ್ಷೆ ವಿಧಿಸಿದ್ದಾರೆ.

ಈಕೆ ಮಾಡಿದ್ದ ಸಾಮಾಜಿಕ ಜಾಲತಾಣ ಪೋಸ್ಟ್ ಸೌದಿ ಅರೇಬಿಯಾದ ಸಮಗ್ರತೆ ಹಾಗೂ ಏಕತೆಗೆ ಧಕ್ಕೆ ತರುವಂತೆ ಇತ್ತು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಸ್ಥಿರತೆಗೆ ಈಕೆಯ ಪೋಸ್ಟ್ ಹಾನಿಕರವಾಗಿತ್ತು ಎಂದು ನ್ಯಾಯಾಧೀಶರು ಚಾಟಿ ಬೀಸಿದ್ಧಾರೆ. ಆದರೆ, ಅಪರಾಧಿ ಮಹಿಳೆ ನೌರಾ ಬಿಂಟ್ ಸಯೀದ್ ಅಲ್ ಖಹ್ತಾನಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ಏನು? ಅದರಲ್ಲಿ ಯಾವ ಸಂದೇಶ ಇತ್ತು ಅನ್ನೋದನ್ನು ನ್ಯಾಯಾಲಯ ಬಹಿರಂಗ ಮಾಡಿಲ್ಲ.