ನನಗೂ ಪ್ರಾಣ ಬೆದರಿಕೆ ಇತ್ತು: ಸುಮಲತಾ ಅಂಬರೀಶ್.

55
firstsuddi

ಮಂಡ್ಯ: ನನಗೂ ಪ್ರಾಣ ಬೆದರಿಕೆ ಇತ್ತು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಬಹಿರಂಗಪಡಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಕಾವೇರಿ ಭವನದಲ್ಲಿ ಆಯೋಜಿಸಿದ್ದ ತಮ್ಮ ಅಧಿಕಾರ ಅವಧಿಯ ಕೊನೆ ದಿಶಾ ಸಭೆಯಲ್ಲಿ ಮಾತನಾಡಿದ ಅವರು, ನನಗೆ ನಿರಂತರವಾಗಿ ಜೀವ ಬೆದರಿಕೆ ಕರೆ ಬರುತ್ತಿದ್ದವು. ಕೆಆರ್​ಎಸ್ ಉಳಿವಿಗಾಗಿ ಅಕ್ರಮದ ವಿರುದ್ಧ ಹೋರಾಡಿದ್ದೇನೆ. ಹೋರಾಟದ ಫಲವಾಗಿ ಹೈಕೋರ್ಟ್ ಗಣಿಗಾರಿಕೆ ನಿಷೇಧಿಸಿದೆ ಎಂದು ಹೇಳಿದ್ದಾರೆ.

ಸುಮಲತಾ ಅಧ್ಯಕ್ಷತೆಯ ಕೊನೆಯ ದಿಶಾ ಸಭೆಯಾಗಿದ್ದರಿಂದ ಜಿಲ್ಲಾಡಳಿತದಿಂದ ಸಂಸದೆಯನ್ನು ಸನ್ಮಾನಿಸಿ ಗೌರವಿಸಲಾಯಿತು. ಮಂಡ್ಯ ಡಿಸಿ ಡಾ.ಕುಮಾರ್, ಸಿಇಓ ತನ್ವೀರ್ ಆಸೀಫ್, ಎಸ್ ಪಿ ಎನ್.ಯತೀಶ್ ರಿಂದ ಸುಮಲತಾ ಅವರಿಗೆ ಸನ್ಮಾನ ನಡೆಯಿತು. ಶಾಲು ಹೊದಿಸಿ, ಹಾರ ಹಾಕಿ ಗಣಪತಿ ವಿಗ್ರಹ ಗಿಫ್ಟ್ ನೀಡಿ ಬೀಳ್ಕೊಡಲಾಯಿತು.