ನನ್ನ ಬಳಿ ಹಣವಿಲ್ಲ, ಭಾರತದಲ್ಲಿರುವ ನನ್ನ ವಕೀಲರಿಗೆ ಫೀಸ್ ಕಟ್ಟಲು ಹಣ ಕೊಡಿ : ಲಂಡನ್ ಕೋರ್ಟ್ ಮೊರೆ ಹೋದ ವಿಜಯ್ ಮಲ್ಯ!

137
firstsuddi

ಲಂಡನ್ : ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯ ಅವರು ಭಾರತದಲ್ಲಿನ ತನ್ನ ವಕೀಲರಿಗೆ ಶುಲ್ಕ ಪಾವತಿಸಲು ಹಣ ನೀಡಿ ಎಂದು ಲಂಡನ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ವಿಜಯ್ ಮಲ್ಯ ಅವರು ನನ್ನ ಬಳಿ ಹಣವಿಲ್ಲ, ನನ್ನ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ದಯವಿಟ್ಟು ವಕೀಲರಿಗೆ ಹಣ ನೀಡಲು ಲಂಡನ್ ನ ಕೋರ್ಟ್ ಫಂಡ್ಸ್ ಆಫೀಸ್ ನಿಂದ 7.8 ಕೋಟಿ ರೂ. ಕೊಡಿ ಎಂದು ನ್ಯಾಯಾಲಯದ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಫೆಬ್ರವರಿಯಲ್ಲಿ ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಡೆಪ್ಯೂಟಿ ಐಸಿಸಿ ನ್ಯಾಯಾಧೀಶ ಬಾರ್ನೆಟ್ ಅವರು, ಭವಿಷ್ಯದ ಕಾನೂನು ಶುಲ್ಕ ಹಾಗೂ ತನ್ನ ಜೀವನ ಸಾಗಿಸಲು ಮಾಸಿಕ 23 ಲಕ್ಷ ರೂ.ಗಳನ್ನು ಕೋರ್ಟ್ ಫಂಡ್ಸ್ ಆಫೀಸ್ ನಿಂದ ನೀಡಲು ಅನುಮತಿಸಿದ್ದರು. ಆದರೆ ಇದರಲ್ಲಿ ಭಾರತದಲ್ಲಿನ ವಕೀಲರಿಗೆ ನೀಡುವ ಹಣವನ್ನು ಸೇರಿಸಿರಲಿಲ್ಲ. ಬಳಿಕ ಮಲ್ಯ ಹೆಸರಿನಲ್ಲಿರುವ ಕೋರ್ಟ್ ಫಂಡ್ಸ್ ಆಫೀಸ್ ನಿಂದ ಒಟ್ಟು 12 ಕೋಟಿ ರೂ. ಆಸ್ತಿಯನ್ನು ಬಳಸಲು ಮಲ್ಯಗೆ ಬರ್ನೆಟ್ ಅವರು ಅನುಮತಿ ನೀಡಿದ್ದರು. ಅದರಂತೆ ಈಗ ವಿಜಯ್ ಮಲ್ಯ ಅವರು ತನ್ನ ವಕೀಲರಿಗೆ ಸುಮಾರು 8 ಕೋಟಿ ರೂಪಾಯಿ ಶುಲ್ಕ ಕೊಡಬೇಕು ಎಂದು ತಿಳಿಸಲಾಗಿ, ಕೋರ್ಟ್ ಈಗ ಆ ಹಣವನ್ನು ಬಳಸಿಕೊಳ್ಳುವಂತೆ ಹೇಳಿದೆ.